ನವದೆಹಲಿ, ಜ 29 (DaijiworldNews/HR): 'ಪದ್ಮ' ಪ್ರಶಸ್ತಿಗೆ ಭಾಜನರಾದ ಜನರ ಜೀವನ ಮತ್ತು ಕಥೆಗಳ ಬಗ್ಗೆ ಓದುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಲ್ಲಿ ಮನವಿ ಮಾಡಿಕೊಂಧಿದದಾರೆ.
ಇಂದು 97 ನೇ ಆವೃತ್ತಿ ಮತ್ತು 2023 ರ ಮೊದಲ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ಬುಡಕಟ್ಟು ಪ್ರದೇಶಗಳ ವಿವಿಧ ಚಿತ್ರಕಾರರು, ಸಂಗೀತಗಾರರು, ರೈತರು, ಕುಶಲಕರ್ಮಿಗಳು - ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದ್ದು, ಎಲ್ಲಾ ದೇಶವಾಸಿಗಳು ಅವರ ಸ್ಪೂರ್ತಿದಾಯಕ ಕಥೆಗಳನ್ನು ಓದಬೇಕೆಂದು ನಾನು ಕೋರುತ್ತೇನೆ ಎಂದರು.
ಇನ್ನು ಬುಡಕಟ್ಟು ಭಾಷೆಗಳಾದ ಟೊಟೊ, ಹೋ, ಕುಯಿ, ಕುವಿ ಮತ್ತು ಮಂದಾದಲ್ಲಿ ಕೆಲಸ ಮಾಡಿದ ಅನೇಕ ಗಣ್ಯರು. ಈ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ ಎಂದಿದ್ದಾರೆ.
ಬುಡಕಟ್ಟು ಜೀವನವು ನಗರ ಜೀವನಕ್ಕಿಂತ ಭಿನ್ನವಾಗಿದ್ದು, ಅದು ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಇದೆಲ್ಲದರ ಹೊರತಾಗಿಯೂ, ಬುಡಕಟ್ಟು ಸಮಾಜಗಳು ಯಾವಾಗಲೂ ತಮ್ಮ ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ಉತ್ಸುಕವಾಗಿವೆ ಎಂದು ಹೇಳಿದ್ದಾರೆ.