ಬೆಂಗಳೂರು,ಮಾ.12(AZM):ಕುಖ್ಯಾತ ರೌಡಿ ಲಕ್ಷ್ಮಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಂದು 6 ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಸಿಸಿಬಿಯ ಡಿಸಿಪಿ ಗಿರೀಶ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಜೆಡಿಎಸ್ ಅಧ್ಯಕ್ಷತೆಯ ಪುತ್ರಿ ವರ್ಷಿಣಿ ಎಂಬಾಕೆ ಈ ಕೊಲೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಈಕೆ ಲಕ್ಷ್ಮಣ್ ನ ಗೆಳತಿಯಾಗಿರುವಳು. ಈಕೆ ಲಂಡನ್ ನಲ್ಲಿದ್ದು ಕೊಲೆಗೆ ಸ್ಕೆಚ್ ಮಾಡಿದ್ದು, ಲಕ್ಷ್ಮಣ್ ನಿಂದಲೇ ಸಾಕಷ್ಟು ಹಣವನ್ನು ಪಡೆದು ಆತನ ಎದುರಾಳಿ ರೌಡಿಗೆ ಹಣಕಾಸು ನೆರವನ್ನು ನೀಡಿದ್ದಳು ಎಂದು ತನಿಖೆಯ ಮೂಲಕ ತಿಳಿದು ಬಂದಿದೆ ಎಂದರು.
ಲಕ್ಷ್ಮಣ್ನನ್ನು ಮಾ.7ರಂದು ಹೊಟೇಲ್ಗೆ ಕರೆಸಿದ್ದಲ್ಲದೆ ಅತ್ತ ಹಂತಕರಿಗೂ ಸಹ ಈತ ಬಂದಿರುವ ವಿಷಯ ತಿಳಿಸಿ ಕೊಲೆಗೆ ಸಹಕರಿಸಿದ್ದಳೆಂದು ಅವರು ಹೇಳಿದರು.
ಈ ಪ್ರಕರಣದಲ್ಲಿ ಬಂಧಿತರಾಗಿರುವ ಉಳಿದ ಆರೋಪಿಗಳನ್ನು ಸಹ ತೀವ್ರ ವಿಚಾರಣೆ ಗೊಳಪಡಿಸಲಾಗಿದೆ ಎಂದು ಡಿಸಿಪಿ ಗಿರೀಶ್ ಅವರು ಹೇಳಿದ್ದಾರೆ.