ತಿರುವನಂತಪುರಂ, ಜ 30 (DaijiworldNews/HR): ಆರ್ಎಸ್ಎಸ್ ಈಗ ರಾಷ್ಟ್ರದ ಸಾಂವಿಧಾನಿಕ ಮೌಲ್ಯಗಳಿಗೆ ಕಡಿಮೆ ಗೌರವ ನೀಡುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ.
ಗಾಂಧಿಯವರ 75 ನೇ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಹಿಂದೂ ರಾಷ್ಟ್ರೀಯತಾವಾದಿಗಳು ಬಹುಮತೀಯ ಪಂಥದ ಬೆದರಿಕೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದ ಗಾಂಧಿಯನ್ನು ಯಾವಾಗಲೂ ಶತ್ರು ಎಂದು ಪರಿಗಣಿಸುತ್ತಾರೆ. ಗಾಂಧಿ ತಮ್ಮ ಕೊನೆಯ ಉಸಿರು ಇರುವವರೆಗೂ ಹಿಂದೂ-ಮುಸ್ಲಿಂ ಸೌಹಾರ್ದತೆಗಾಗಿ ನಿಂತಿದ್ದರು ಎಂದರು.
ಇನ್ನು ಭಾರತವು ಪ್ರತಿಯೊಂದು ಅಂಶದಲ್ಲೂ ಸಂಘಪರಿವಾರದ ಹಿಂದುತ್ವ ರಾಷ್ಟ್ರ ಪರಿಕಲ್ಪನೆಗೆ ವಿರುದ್ಧವಾಗಿದೆ. ಗಾಂಧೀಜಿಯನ್ನು ನಾಥೂರಾಂ ವಿನಾಯಕ್ ಗೋಡ್ಸೆ ಎಂಬ ಧಾರ್ಮಿಕ ಮತಾಂಧನು ಗುಂಡಿಕ್ಕಿ ಕೊಂದಾಗ ಭಾರತದ ಕಲ್ಪನೆಯೇ ಘಾಸಿಗೊಂಡಿತು ಎಂದಿದ್ದಾರೆ.