ನವದೆಹಲಿ, ಜ 31 (DaijiworldNews/HR): ವಿಶ್ವದ ಅತ್ಯಂತ ಶ್ರೀಮಂತ ಭಾರತೀಯ ಆಗಿದ್ದ ಬಿಲಿಯನೇರ್ ಗೌತಮ್ ಅದಾನಿ ಅವರು ಇದೀಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಟಾಪ್ 10ರಲ್ಲೂ ಇಲ್ಲದಂತಾಗಿದೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನ ಪ್ರಕಾರ, ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು $ 84.4 ಬಿಲಿಯನ್ ಆಗಿದ್ದು, ಈ ಮೂಲಕ, ಪ್ರಸ್ತುತ ವಿಶ್ವದ 11 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆದಾಗ್ಯೂ, ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ, ಗೌತಮ್ ಅದಾನಿ ವಿಶ್ವದ 8 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಎರಡೂ ಸೂಚ್ಯಂಕಗಳು ಗೌತಮ್ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಉಳಿಸಿದೆ.
ಅಮೆಜಾನ್ನ ಜೆಫ್ ಬೆಜೋಸ್ ನಿವ್ವಳ ಮೌಲ್ಯವು $ 124 ಶತಕೋಟಿಗೆ ಏರಿದ್ದು, ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. $ 189 ಶತಕೋಟಿಯೊಂದಿಗೆ ಬರ್ನಾರ್ಡ್ ಅರ್ನಾಲ್ಟ್ ಭೂಮಿಯ ಮೇಲಿನ ಶ್ರೀಮಂತ ವ್ಯಕ್ತಿಯಾಗಿ ಉಳಿದಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು $ 8.21 ಶತಕೋಟಿಯಷ್ಟು ಕುಸಿದಿದೆ ಮತ್ತು ಬ್ಲೂಮ್ಬರ್ಗ್ ಡೇಟಾ ಪ್ರಕಾರ, ಅದಾನಿ ವರ್ಷದಿಂದ ಇಲ್ಲಿಯವರೆಗೆ $ 36.1 ಬಿಲಿಯನ್ ಕಳೆದುಕೊಂಡಿದ್ದಾರೆ.