ಚೆನ್ನೈ, ಜ 31 (DaijiworldNews/HR): ತಮಿಳುನಾಡು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪುಷ್ಪರಾಣಿ(45 ) ಎಂಬವರು ಫ್ಲವರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ಅವರು ಸೈಕಲ್ ನಲ್ಲಿಯೋ ಓಡಾದುವುದು ಇದೀಗ ಸುದ್ದಿಯಾಗಿದೆ.
ಈ ಕುರಿತು ಮಾತನಾಡಿದ ಪುಷ್ಪರಾಣಿ, ನನ್ನ ತಂದೆ ಪೊಲೀಸ್ ಅಧಿಕಾರಿಯಾಗಿದ್ದರು ಮತ್ತು ಅವರು ಪ್ರತಿದಿನ ಸೈಕಲ್ ಸವಾರಿ ಮಾಡುತ್ತಿದ್ದರು. ಅವರು ನನಗೆ ಸುರಕ್ಷಿತ ಪೆಡಲಿಂಗ್ ಕಲಿಸಿದ್ದು, ಅಂದಿನಿಂದ ಹಿಂತಿರುಗಿ ನೋಡಲಿಲ್ಲ ನಾನು ಸೈಕಲ್ ನಲ್ಲಿಯೇ ಸ್ಟೇಷನ್ಗೆ ಮತ್ತು ಮನೆಗೆ ಮರಳುತ್ತಿದ್ದೇನೆ ಎಂದರು.
ಇನ್ನು ಪ್ರತಿದಿನ ಇವರು ಮನೆಯಿಂದ ಪೊಲೀಸ್ ಠಾಣೆಗೆ ಮತ್ತು ಹಿಂತಿರುಗಿ ಮನೆಗೆ ಕನಿಷ್ಠ 6 ಕಿಮೀ ಸೈಕಲ್ನಲ್ಲಿ ಹೋಗುತ್ತಾರೆ. ಈ ನಡುವೆ ಸಿಟಿ ಪೊಲೀಸ್ ಕಮಿಷನರ್ ಕಚೇರಿಗೂ ಸೈಕಲ್ನಲ್ಲಿಯೇ ಹೋಗಿ ಮಾದರಿಯಾಗಿದ್ದಾರೆ.