ಅಮರಾವತಿ, ಜ 31( DaijiworldNews/MS): ಮುಂದಿನ ದಿನಗಳಲ್ಲಿ ವಿಶಾಖಪಟ್ಟಣಂ ರಾಜ್ಯದ ಹೊಸ ’ರಾಜಧಾನಿ ’ಯಾಗಲಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮಂಗಳವಾರ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಂಧ್ರ ಸಿಎಂ, ಮುಂದಿನ ದಿನಗಳಲ್ಲಿ ನಮ್ಮ ರಾಜಧಾನಿಯಾಗಲಿರುವ ವಿಶಾಖಪಟ್ಟಣಕ್ಕೆ ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ. ನಾನು ಕೂಡ ಮುಂದಿನ ದಿನಗಳಲ್ಲಿ ವಿಶಾಖಪಟ್ಟಣಕ್ಕೆ ಶಿಫ್ಟ್ ಆಗಲಿದ್ದೇನೆ. ನಾವು ಮಾರ್ಚ್ 3 ಮತ್ತು 4 ರಂದು ಅಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸುತ್ತಿದ್ದೇವೆ. ” ಎಂದು ಘೋಷಿಸಿದ್ದಾರೆ.
ಅಮರಾವತಿಯನ್ನ ಶಾಸಕಾಂಗ ರಾಜಧಾನಿಯಾಗಿ, ವಿಶಾಖಪಟ್ಟಣವನ್ನ ಕಾರ್ಯಕಾರಿ ರಾಜಧಾನಿಯಾಗಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿಯಾಗಿ ಮೂರು ರಾಜಧಾನಿಗಳನ್ನ ನಿರ್ಮಿಸುವುದು ಮುಖ್ಯಮಂತ್ರಿ ಜಗನ್ ಯೋಜನೆಯಾಗಿತ್ತು. ಅದ್ರಂತೆ, ವೈಎಸ್ಆರ್ ಕಾಂಗ್ರೆಸ್ ಪಕ್ಷವು ದಕ್ಷಿಣ ಆಫ್ರಿಕಾ ಮಾದರಿಯ ಮೂಲಕ ಮೂರು ರಾಜಧಾನಿಗಳೊಂದಿಗೆ ಆಡಳಿತವನ್ನ ವಿಕೇಂದ್ರೀಕರಿಸಲು ಬಯಸಿದೆ