ಶಿವಮೊಗ್ಗ, ಜ 31 (DaijiworldNews/HR): ಒಂದು ರಾಜಕೀಯ ಪಕ್ಷಕ್ಕೆ ರಾಜ್ಯಾಧ್ಯಕ್ಷರು, ಸಂವಿಧಾನ, ಚುನಾವಣೆ ಸಮಿತಿ ಇರುತ್ತದೆ. ಅದು ಬಿಟ್ಟು ಇವರೇ ನಾನೇ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಿದ್ದಾರೆ. ಇವರಿಗೆ ಪಕ್ಷದಲ್ಲಿ ಚುನಾವಣೆ ಸಮಿತಿ ಇಲ್ಲವೇ? ಎಂದು ಜೆಡಿಎಸ್ ವಿರುದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅನಿತಾ ಕುಮಾರಸ್ವಾಮಿಯವರು ಮಗ ನಿಖಿಲ್ ಅಭ್ಯರ್ಥಿ ಘೋಷಣೆ, ಭವಾನಿ ರೇವಣ್ಣ ನಾನೇ ಅಭ್ಯರ್ಥಿಯೆಂದು ಘೋಷಣೆ, ಸಿದ್ದು ಕೋಲಾರಕ್ಕೆ ನಾನೇ ಅಭ್ಯರ್ಥಿ ಘೋಷಣೆ. ಅದನ್ನು ಹೇಳಲು ಇವರು ಯಾರು? ಅವರಿಗೆ ಪಕ್ಷ, ಚುನಾವಣೆ ಸಮಿತಿ ಇಲ್ಲವೇ ಎಂದರು.
ಇನ್ನು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಪಕ್ಷ ನೋಡಿದರೆ ಗೊತ್ತಾಗುತ್ತದೆ. ಯಾವ ಶಕುನಿಗಳು ಬೆನ್ನತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಲಿ. ಅವರು ತಿದ್ದಿಕೊಳ್ಳಲಿ. ಅವರ ಪಕ್ಷದ ಆಂತರಿಕ ವಿಚಾರ ಎಂದು ಹೇಳಿದ್ದಾರೆ.