ನವದೆಹಲಿ, ಫೆ 01 ( DaijiworldNews/MS): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2023-24ರ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ವಿತ್ತ ಸಚಿವರು ಇಂದು ಬೆಳಗ್ಗೆ 11 ಗಂಟೆಗೆ ಸತತ ಐದನೇ ಬಾರಿಗೆ ಕೇಂದ್ರ ಬಜೆಟ್ ಭಾಷಣ ಆರಂಭಿಸಲಿದ್ದಾರೆ.
ಹಿಂದಿನ ಎರಡು ಕೇಂದ್ರ ಬಜೆಟ್ ಗಳಂತೆ ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡಿಸಲಿದ್ದಾರೆ. ಕೋವಿಡ್ ಸೋಂಕಿನ ನಂತರ ಮತ್ತು ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ಇದು ಮೊದಲ ಸಾಮಾನ್ಯ ಬಜೆಟ್ ಆಗಿದೆ. ಬಜೆಟ್ ಸ್ಥಿರ ಬೆಳವಣಿಗೆ ದರವನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿದೆ.
ಲೋಕಸಭೆ ಚುನಾವಣೆಗೂ ಮುನ್ನ ಕಣ್ಣಿಗೆ ಕಟ್ಟುವ ಭರವಸೆಗಳು ಗೃಹ ಸಾಲದ ದರಗಳು ಕಡಿಮೆ ಮಾಡುವ , ಆದಾಯ ತೆರಿಗೆ ಸ್ಲ್ಯಾಬ್ಗಳನ್ನು ಬದಲಾಯಿಸುವ ಸಾಧ್ಯತೆಗಳ ಬಗ್ಗೆ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ವೆಚ್ಚವನ್ನು ಹೆಚ್ಚಿಸಲು ಒತ್ತು ನೀಡುವ ಸಾಧ್ಯತೆ ಇದ್ದು, ರಿಯಲ್ ಎಸ್ಟೇಟ್ ಮಾರುಕಟ್ಟೆಗೂ ಉತ್ತೇಜನ ಸಿಗಲಿದ್ದು, ಈ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಬಹುದು. ಇನ್ನು ಬಜೆಟ್ ನಲ್ಲಿ ಹೆಚ್ಚುವರಿ ವಂದೇ ಮಾತರಂ ರೈಲು ಘೋಷಣೆ ಸಾಧ್ಯತೆಯೂ ಇದೆ.