ನವದೆಹಲಿ, ಫೆ 01 ( DaijiworldNews/MS): ಕಳೆದ ವರ್ಷದಂತೆ ಇಂದು ಕೂಡಾ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2023-2024 ಅನ್ನು ಪೇಪರ್ ರಹಿತ ರೂಪದಲ್ಲಿ ಮಂಡಿಸಲಿದ್ದಾರೆ.
ಬಜೆಟ್ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮ್ ಅವರು ಸಾಂಪ್ರದಾಯಿಕ ಪ್ರಾಚೀನ ಶೈಲಿಯಲ್ಲಿ ಕೆಂಪು ವಸ್ತ್ರದ ಮೇಲೆ ರಾಷ್ಟ್ರೀಯ ಲಾಂಛನವನ್ನು ಹೊಂದಿರುವ ಪೌಚ್ನಲ್ಲಿ ಡಿಜಿಟಲ್ ಟ್ಯಾಬ್ಲೆಟ್ ಅನ್ನು ಸುತ್ತಿಕೊಂಡು ತಮ್ಮ ಕಚೇರಿಗೆ ಬಂದರು.
ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ತಮ್ಮ ತಂಡದೊಂದಿಗೆ ಕಚೇರಿಯ ಹೊರಗೆ ಚಿತ್ರಕ್ಕೆ ಪೋಸ್ ನೀಡಿದರು.
ಇಂದು ಬೆಳಗ್ಗೆ 11 ಗಂಟೆಗೆ ಸತತ ಐದನೇ ಬಾರಿಗೆ ಸೀತಾರಾಮನ್ ಅವರು ಕೇಂದ್ರ ಬಜೆಟ್ ಭಾಷಣ ಆರಂಭಿಸಲಿದ್ದಾರೆ. ಸೂಟ್ಕೇಸ್ ಬದಲು ಕೆಂಪು ವಸ್ತ್ರದಲ್ಲಿ ಬಜೆಟ್ ತಂದು, ಹಳೆಯ ಸಂಪ್ರದಾಯ ಹಾಗೂ ವಸಾಹತುಶಾಹಿ ಪರಂಪರೆಯನ್ನು ತ್ಯಜಿಸಿದ್ದರು
ಅದೇ ವರ್ಷ, 'ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್' ಅನ್ನು ಪ್ರಾರಂಭಿಸಿದರು.