ಬೆಂಗಳೂರು, ಫೆ 01 (DaijiworldNews/HR): 2023 ನೇ ಸಾಲಿನ ಕೇಂದ್ರ ಬಜೆಟ್ ಅನ್ನುಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದು, ಇದು ಅವರ ಐದನೇ ಬಜೆಟ್ ಆಗಿದ್ದು, ಚುನಾವಣಾ ಹೊಸ್ತಿಲಲ್ಲಿರುವ ಕರ್ನಾಟವು ಈ ಬಾರಿಯ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.
ಈ ಕುರಿತು ಮಾತನಾಡಿರುವ ರಾಜಕೀಯ ವಿಶ್ಲೇಷಕ ಪ್ರೊ. ಸಂದೀಪ್ ಶಾಸ್ತ್ರಿ, ರಾಜ್ಯವು ಚುನಾವಣಾ ಹೊಸ್ತಿನಲ್ಲಿರುವುದರಿಂದ ಕರ್ನಾಟಕವು ಈ ಬಾರಿಯ ಕೇಂದ್ರದ ಬಜೆಟ್ ಮೇಲೆ ಹೆಚ್ಚಿನದ್ದನ್ನು ನಿರೀಕ್ಷಿಸಬಹುದು. ಕೇಂದ್ರ ಸರ್ಕಾರವು ಚುನಾವಣೆಗೆ ಒಳಪಡುವ ರಾಜ್ಯಗಳಿಗೆ ವಿಶೇಷ ಹಂಚಿಕೆಗಳನ್ನು ಘೋಷಿಸುವುದು ಸಾಮಾನ್ಯವಾಗಿದ್ದು, ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಗಲಿದೆ ಎಂದಿದ್ದಾರೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಈ ವರ್ಷವನ್ನು 'ಅಂತರರಾಷ್ಟ್ರೀಯ ರಾಗಿ ವರ್ಷ' ಎಂದು ಘೋಷಿಸಲಾಗಿದ್ದು, ಕರ್ನಾಟಕವು ರಾಗಿ ಕ್ಷೇತ್ರದಲ್ಲಿ ಪ್ರವರ್ತಕವಾಗಿರುವುದರಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನಿರೀಕ್ಷಿಸಬಹುದಾಗಿದೆ ಎಂದರು.
ಇನ್ನು ಫೆಬ್ರವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ.