ನವದೆಹಲಿ, ಫೆ 01 ( DaijiworldNews/MS): 2023-2024 ನೇ ಸಾಲಿನ ಕೇಂದ್ರ ಬಜೆಟ್ ಮಂಗಳವಾರ ಮಂಡನೆಯಾಗುತ್ತಿದೆ. ಜಾಗತಿ ಮಟ್ಟದ ಆರ್ಥಿಕ ಹಿಂಜರಿತ, ಕೊವೀಡ್ , ಹಣದುಬ್ಬರ ಹೀಗೆ ಸವಾಲುಗಳ ನಡುವಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಬಜೆಟ್'ಗೆ ಅನುಮೋದನೆ ಪಡೆದುಕೊಳ್ಳಲಾಯಿತು.
ಲೋಕಸಭೆಯಲ್ಲಿ ಬಜೆಟ್ ಆರಂಭಿಸಿದ ನಿರ್ಮಲಾ ಸೀತಾರಾಮನ್, ಅಮೃತ ಕಾಲದ ಮೊದಲ ಬಜೆಟ್ ಭಾರತ ಆರ್ಥಿಕತೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ವಿಶ್ವವೇ ಭಾರತದ ಬೆಳವಣೆಗೆಯತ್ತ ನೋಡುತ್ತಿದೆ ಎಂದು ಹೇಳಿದರು.