ನವದೆಹಲಿ, ಫೆ 01 ( DaijiworldNews/MS): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ’ಪೊಲ್ಯೂಟಿಂಗ್ ವೆಹಿಕಲ್ಸ್ ’ (ಮಾಲಿನ್ಯಕಾರಕ ವಾಹನಗಳು) ಅನ್ನುವ ಬದಲಿಗೆ ’ಪೊಲಿಟಿಕಲ್ ’ ಎಂದು ಹೇಳಿದ ಘಟನೆ ನಡೆದಿದೆ.
'ಹಳೆಯ ರಾಜಕೀಯ ವಾಹನಗಳನ್ನು ಬದಲಾಯಿಸಲಾಗುವುದು .. ಕ್ಷಮಿಸಿ ಹಳೆಯ ಮಾಲಿನ್ಯಕಾರಕ ವಾಹನಗಳಿಗೆ ಆದ್ಯತೆ ನೀಡಲಾಗುವುದು..' ಎನ್ನುತ್ತಾ ಬಜೆಟ್ ಮಂಡನೆ ಮುಂದುವರಿಸಿದರು..ಈ ಸ್ವಾರಸ್ಯಕರ ಘಟನೆ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು ನೆಟ್ಟಿಗರು ಇದಕ್ಕೆ ತರಹೇವಾರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
೨೦೭೦ ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣ ಗುರಿಯಾಗಿದ್ದು, ಹೊಸ ಸರ್ಕಾರಿ ವಾಹನ ಖರೀದಿಗೆ ಕೇಂದ್ರ ಸರ್ಕಾರ ಅನುದಾನ ಘೋಷಿಸಿದ್ದಾರೆ.