ನವದೆಹಲಿ, ಫೆ 01 (DaijiworldNews/HR): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಇಂದು ಬಜೆಟ್ ಮಂಡನೆ ಮಾಡಿದ್ದು, ಈ ವೇಳೆ ಅವರು ಕಪ್ಪು ಅಂಚು ಹೊಂದಿರುವ ಗಾಢ ಕೆಂಪು ಕೈಮಗ್ಗ ಸೀರೆಯಲ್ಲಿ ಮಿಂಚಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ದಿನದ ಸೀರೆಗಳು ಯಾವಾಗಲೂ ಮಹತ್ವದ್ದಾಗಿದ್ದು, ಇದು ಅವರ 5ನೇ ಬಜೆಟ್. 2024ರ ಲೋಕಸಭಾ ಚುನಾವಣೆಗೂ ಮುನ್ನ ಇದು ಕೊನೆಯ ಪೂರ್ಣ ಬಜೆಟ್ ಆಗಿದೆ.
ಇನ್ನು ಪ್ರತಿ ಬಾರಿಯೂ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ ಆಯ್ಕೆ ಮಾಡಿಕೊಳ್ಳುವ ಸೀರೆ ಹೆಚ್ಚು ಮಹತ್ವ ವಹಿಸುತ್ತದೆ. ಈ ಬಾರಿ ಬಜೆಟ್ ಮಂಡನೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಕಪ್ಪು ಅಂಚು ಹೊಂದಿರುವ ಗಾಢ ಕೆಂಪು ಸೀರೆಯನ್ನು ಆಯ್ಕೆ ಮಾಡಿದ್ದು, ಇದು ಸಾಂಪ್ರದಾಯಿಕ ಕಾಟನ್ ಇಳಕಲ್ ಸೀರೆ ಟೆಂಪಲ್ ಬಾರ್ಡರ್ ಹೊಂದಿತ್ತು.