ನವದೆಹಲಿ, ಫೆ 01 ( DaijiworldNews/MS): ಹೊಸ ತೆರಿಗೆ ಪದ್ಧತಿ ಆದಾಯ ತೆರಿಗೆ ವಿನಾಯ್ತಿ ಮೊತ್ತವನ್ನು ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ನಲ್ಲಿ ತೆರಿಗೆ ವಿವರಗಳನ್ನು ನೀಡಿದ್ದಾರೆ.
ತೆರಿಗೆ ವಿನಾಯಿತಿ ಹೀಗಿದೆ:
₹ 7 ಲಕ್ಷದವರೆಗೆ ತೆರಿಗೆ ವಿನಾಯಿತಿ ಘೋಷಣೆ
₹3ರಿಂದ ₹6 ಲಕ್ಷದವರೆಗಿನ ಆದಾಯಕ್ಕೆ ಶೇ.5ರಷ್ಟು
₹6ರಿಂದ ₹9 ಲಕ್ಷದವರಿನ ಆದಾಯಕ್ಕೆ ಶೇ.10ರಷ್ಟು
₹9ರಿಂದ ₹12 ಲಕ್ಷದ ಆದಾಯಕ್ಕೆ ಶೇ.15ರಷ್ಟು
₹12ರಿಂದ ₹15 ಲಕ್ಷದವರೆಗಿನ ಆದಾಯಕ್ಕೆ ಶೇ.20ರಷ್ಟು
ತೆರಿಗೆ ಸ್ಲ್ಯಾಬ್ಗಳನ್ನು 6 ಹಂತಗಳಿಂದ 5 ಹಂತಗಳಿಗೆ ಬದಲಿಸಲಾಗಿದೆ. ಹಳೆಯ ಅಥವಾ ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುವ ಯಾವುದೇ ಭಾರತೀಯ ವರ್ಷಕ್ಕೆ ₹ 7 ಲಕ್ಷ ಆದಾಯ ಪಡೆಯುತ್ತಿದ್ದರೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ.