ದಾವಣಗೆರೆ, ಫೆ 01 (DaijiworldNews/HR): ಕೇಂದ್ರ ಸರ್ಕಾರವು ಜನರನ್ನು ಮರಳು ಮಾಡಲು ಬಜೆಟ್ ಘೋಷಣೆ ಮಾಡಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬಜೆಟ್ ಘೋಷಣೆ ಆದ್ರೂ ಹಣಕಾಸು ಬಿಡುಗಡೆ ಏಪ್ರಿಲ್ ಮೇಲೆ ಆಗುತ್ತದೆ. ಇದೊಂದು ಕರ್ನಾಟಕ ಕೇಂದ್ರಿತ ಚುನಾವಣಾ ಬಜೆಟ್. ರಾಜ್ಯದಲ್ಲಿ ಚುನಾವಣೆ ಕೆಲವೇ ತಿಂಗಳು ಇದೆ. ಬಜೆಟ್ ನಲ್ಲಿ ಘೋಷಣೆ ಮಾಡಿದ ಎಲ್ಲ ಯೋಜನೆಗಳು ಜಾರಿ ಆಗಬೇಕಲ್ಲ ಎಂದರು.
ಇನ್ನು ಭದ್ರಾ , ಮಹಾದಾಯಿ , ಕೃಷ್ಣ ಏನೇ ಘೋಷಣೆ ಮಾಡಿದ್ರೂ ಮೊದಲೇ ಮಾಡಬೇಕಿತ್ತು. ಇಂದಿನ ಕಾರ್ಯಕ್ರಮ ಜಾರಿಗೆ ತರಲು ಮುಂದಿನ ಸರ್ಕಾರ ಬರಬೇಕು. ಕೇಂದ್ರದ ಘೋಷಣೆ, ಘೋಷಣೆಯಾಗಿಯೇ ಉಳಿಯತ್ತೆ ಎಂದಿದ್ದಾರೆ.