ನವದೆಹಲಿ, ಫೆ 01 ( DaijiworldNews/MS): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ತಮ್ಮ ಸತತ ಐದನೇ ಬಜೆಟ್ ಮಂಡಿಸಿದ್ದು, ಇದು ಅವರು ಈವರೆಗೆ ಮಂಡಿಸಿದ ಬಜೆಟ್ ಅವಧಿಯಲ್ಲಿ ಚಿಕ್ಕದಾಗಿದ್ದು ಕೇವಲ 87 ನಿಮಿಷಗಳಲ್ಲಿ ಮುಗಿಸಿದ್ದಾರೆ.ಕಳೆದ ವರ್ಷದ 92 ನಿಮಿಷಗಳು ಓದಿದ್ದು ಅದಕ್ಕಿಂತ ಐದು ನಿಮಿಷ ಕಡಿಮೆಯಾಗಿದೆ.
ಈ ಹಿಂದೆ ಹಣಕಾಸು ಸಚಿವೆ ನಿರ್ಮಲಾ 2020ರ ಫೆ.1ರಂದು 2020-21ರ ಬಜೆಟ್ ಅನ್ನು 2 ಗಂಟೆ 42 ನಿಮಿಷಗಳ ಕಾಲ ಮಂಡಿಸಿದ್ದರು. ಅದರಲ್ಲೂ ಇನ್ನೂ ಎರಡು ಪುಟ ಓದಲು ಬಾಕಿ ಇತ್ತು. ಓದಿ ಬಳಲಿದ ಪರಿಣಾಮ ಅಲ್ಲಿಗೆ ಮುಕ್ತಾಯಗೊಳಿಸಿದ್ದರು. ಭಾಷಣದ ಉಳಿದ ಭಾಗವನ್ನು ಓದಿದಂತೆ ಪರಿಗಣಿಸುವಂತೆ ಅವರು ಸ್ಪೀಕರ್ಗೆ ಮನವಿ ಮಾಡಿಕೊಂಡರು.
2019ರ ಜುಲೈನಲ್ಲಿ ಅವರು ತಮ್ಮ ಚೊಚ್ಚಲ ಬಜೆಟ್ ಭಾಷಣವನ್ನು 2 ಗಂಟೆ 17 ನಿಮಿಷ ಮಾಡಿದ್ದರು.
ಇನ್ನು ವಿತ್ತ ಸಚಿವರ ಪುತ್ರಿ ವಾಗ್ಮಯಿ ಪರಕಾಲ ಮತ್ತು ಹಲವಾರು ಸಂಬಂಧಿಕರು ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಅವರು ಬಜೆಟ್ ಮಂಡಿಸುತ್ತಿರುವುದನ್ನು ವೀಕ್ಷಿಸಿದರು. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಮೋದಿ ಸರ್ಕಾರ 2.0ದ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಇದಾಗಿದೆ.