ನವದೆಹಲಿ, ಫೆ 01 ( DaijiworldNews/MS):ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಿಗರೇಟ್ ಮೇಲಿನ ತೆರಿಗೆಯನ್ನು ಶೇಕಡ 16ರಷ್ಟು ಹೆಚ್ಚಿಸಿದ್ದಾರೆ. ಹೀಗಾಗಿ ಧೂಮಪಾನಿಗಳ ಜೇಬು ಸುಡಲಿದ್ದು, ಪ್ರತಿ ಪ್ಯಾಕ್ ಮೇಲೆ ಅಂದಾಜು 25ರಿಂದ 30 ರೂ ಏರಿಕೆಯಾಗಿದೆ.
ಎನ್ಸಿಸಿಡಿ (ರಾಷ್ಟ್ರೀಯ ವಿಪತ್ತು ಆಕಸ್ಮಿಕ ತೆರಿಗೆ) ಸುಂಕ ಏರಿಕೆಯಿಂದ ಧೂಮಪಾನಗಳಿಗೆ ಬಿಸಿ ಮುಟ್ಟಿಸಿದೆ. ಇನ್ನೊಂದೆಡೆ ತಂಬಾಕು ಉತ್ಪನ್ನಗಳು ದೇಶದ ಆರೋಗ್ಯ ಕ್ಷೇತ್ರದಲ್ಲಿ ಭಾರಿ ಹೊರೆ ಉಂಟಾಗಲು ಕಾರಣವಾಗುತ್ತಿದೆ. ಹೀಗಾಗಿ ಅವುಗಳ ಮೇಲೆ ಕಡಿವಾಣ ಹಾಕುವುದು ಕೇಂದ್ರ ಸರ್ಕಾರಕ್ಕೆ ಅನಿವಾರ್ಯವಾಗಿದೆ
ಸಿಗರೇಟ್ ಮೇಲಿನ ತೆರಿಗೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಗಾಡ್ಫ್ರೇ ಫಿಲಿಪ್ಸ್ ಇಂಡಿಯಾ ಮತ್ತು ಐಟಿಸಿ ಲಿಮಿಟೆಡ್ ಸೇರಿದಂತೆ ಸಿಗರೇಟ್ ಕಂಪನಿಗಳ ಷೇರುಗಳು ಷೇರುಪೇಟೆ ಸಂವೇದಿ ಸೂಚ್ಯಂಕದಲ್ಲಿ (ಬಿಎಸ್ಇ) ಶೇಕಡ 5 ರಷ್ಟು ಕುಸಿತ ಕಂಡಿವೆ.
ಇನ್ನೊಂದೆಡೆ ಸಿಗರೇಟ್ ಮೇಲಿನ ತೆರಿಗೆ ಹೆಚ್ಚಾಗುತ್ತಿದ್ದಂತೆಯೇ ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್ ಗಳು ಹರಿದಾಡತೊಡಗಿದ್ದು , ನಕ್ಕು ನಗಿಸುವಂತ ಕಾಮೆಂಟ್ಸ್ ಹರಿದಾಡತೊಡಗಿದೆ.