ನವದೆಹಲಿ, ಫೆ 01 (DaijiworldNews/HR): 2023-24ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದು, ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದು, ಇದು ಅಮೃತ್ ಕಾಲದ ಮೊದಲ ಬಜೆಟ್ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಈ ಬಜೆಟ್ ಭದ್ರ ಅಡಿಪಾಯ ಹಾಕಿದ್ದು, ಈ ಬಜೆಟ್ ಬಡವರು, ಮಧ್ಯಮ ವರ್ಗದ ಜನ, ರೈತರು ಸೇರಿದಂತೆ ಮಹತ್ವಾಕಾಂಕ್ಷೆಯ ಯುವ ಭಾರತದ ಕನಸುಗಳನ್ನು ಈಡೇರಿಸಲಿದೆ ಎಂದರು.
ಇನ್ನು ಬಜೆಟ್ ನಲ್ಲಿ ಪರಿಸರ ಮತ್ತು ಹಸಿರೀಕರಣಕ್ಕೆ ಉತ್ತೇಜನ ನೀಡಲಾಗಿದ್ದು, ಹಸಿರು ಶಕ್ತಿ, ಹಸಿರು ಬೆಳವಣಿಗೆ ಮತ್ತು ಹಸಿರು ಮೂಲಸೌಕರ್ಯ ಹಾಗೂ ಹಸಿರು ಉದ್ಯೋಗಗಳನ್ನು ಮತ್ತಷ್ಟು ಸೃಷ್ಟಿಸುವ ಸುಸ್ಥಿರ ಭವಿಷ್ಯವನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.