ಶ್ರೀನಗರ, ಫೆ 01 (DaijiworldNews/DB): ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತಕ್ಕೆ ಸಿಲುಕಿ ವಿದೇಶಿಗರಿಬ್ಬರು ಸಾವನ್ನಪ್ಪಿದ್ದಾರೆ. ಕನಿಷ್ಠ 21 ಮಂದಿ ಸ್ಕೀಯರ್ಗಳು ಹಿಮಪಾದಲ್ಲಿ ಸಿಲುಕಿಕೊಂಡಿದ್ದಾರೆ.
ಈ ಕುರಿತು ಸ್ಥಳೀಯ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಗುಲ್ಮಾರ್ಗ್ನ ಸ್ಕೀಯಿಂಗ್ ರೆಸಾರ್ಟ್ನ ಮೇಲ್ಭಾಗದಲ್ಲಿ ಬುಧವಾರ ಭಾರೀ ಹಿಮಪಾತ ಸಂಭವಿಸಿದೆ. ಇಬ್ಬರು ವಿದೇಶಿಗರು ಹಿಮಪಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಮೃತದೇಹಗಳನ್ನು ಆಸ್ಪತ್ರೆಗೆ ಕಳುಹಿಸಲಾಗಿದ್ದು, ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಇನ್ನು 19 ಮಂದಿ ವಿದೇಶಿ ಪ್ರವಾಸಿಗರನ್ನು ಈವರೆಗೆ ರಕ್ಷಿಸಲಾಗಿದೆ. ಸ್ಕೀಯರ್ಗಳು ಮತ್ತು ವಿದೇಶಿ ಪ್ರಜೆಗಳು ಹಿಮಪಾತದ ವೇಳೆ ತೀರಾ ಇಳಿಜಾರಿನಲ್ಲಿದ್ದರು. ಹೀಗಾಗಿ ಜೀವಹಾನಿ ಸಂಭವಿಸಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ಪೊಲೀಸರು ವಿವರಿಸಿದ್ದಾರೆ.