ನವದೆಹಲಿ, ಫೆ 02 ( DaijiworldNews/MS): ನ್ಯಾಯಾಂಗ-ಕೊಲ್ಜಿಯಂ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮತ್ತು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ವಿರುದ್ಧ ಮುಂಬೈ ವಕೀಲರ ಸಂಘ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದೆ.
ಉನ್ನತ ಸ್ಥಾನದಲ್ಲಿರುವ ಇಬ್ಬರು ಸಂವಿಧಾನದ ಮೇಲೆ ನಂಬಿಕೆ ಕಳೆದುಕೊಳ್ಳುವಂತಹ ಹೇಳಿಕೆ ನೀಡಿದ್ದಾರೆ. ನ್ಯಾಯಾಂಗ ಬಗ್ಗೆ ಗಂಭೀರ ಆರೋಪ ಮಾಡಿದ್ದರೂ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಕೋರ್ಟ್ ಅವರಿಬ್ಬರನ್ನು ಸಾಂವಿಧಾನಿಕ ಹುದ್ದೆಯಿಂದ ತೆರವುಗೊಳಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಬಿಎಲ್ ಎನ್ನ ಅಧ್ಯಕ್ಷ ಅಹ್ಮದ್ ಅಬಿದಿ ಮೂಲಕ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ "ಉಪರಾಷ್ಟ್ರಪತಿ ಮತ್ತು ಕಾನೂನು ಸಚಿವರು, ನ್ಯಾಯಾಂಗದ ಸಂಸ್ಥೆಯನ್ನು ವಿಶೇಷವಾಗಿ ಸುಪ್ರೀಂ ಕೋರ್ಟ್ ವಿರುದ್ದ ಆಕ್ಷೇಪಾರ್ಹ ನೀಡಿದ್ದಾರೆ . ಇದು ಸಾರ್ವಜನಿಕವಾಗಿ ಸುಪ್ರೀಂ ಕೋರ್ಟ್ನ ಪ್ರತಿಷ್ಠೆಯನ್ನು ಕಡಿಮೆ ಮಾಡಿದೆ" ಎಂದು ಆರೋಪಿಸಲಾಗಿದೆ.