ಕೇರಳ, ಫೆ 02 (DaijiworldNews/DB): ದೇಶದಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರು ಗರ್ಭಧಾರಣೆ ಮಾಡಿದ್ದಾರೆ. ಅಲ್ಲದೆ ದಂಪತಿ ಫೋಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ವೈರಲ್ ಆಗಿದೆ.
ಗರ್ಭಿಣಿಯಾಗುವುದು ವಿಶೇಷ ಶಕ್ತಿ. ಹೆಣ್ಣು ಮಾತ್ರ ಗರ್ಭಿಣಿಯಾಗುವ ಭಾಗ್ಯ ಪಡೆದಿದ್ದಾಳೆ. ಆದರೆ ಇದೀಗ ತಂತ್ರಜ್ಞಾನಗಳ ನೆರವಿನಿಂದ ಹೆಣ್ಣಿಗಿರುವ ಶಕ್ತಿಯನ್ನು ಯಾರೂ ಪಡೆಯಲು ಸಾಧ್ಯ ಎಂಬಂತಾಗಿದೆ. ಅದರಂತೆ ಕೇರಳದ ತೃತೀಯ ಲಿಂಗಿಯೊಬ್ಬರು ದೇಶದಲ್ಲೇ ಮೊದಲ ಬಾರಿಗೆ ಗರ್ಭ ಧರಿಸಿ ಸುದ್ದಿಯಾಗಿದ್ದಾರೆ.
ಕೇರಳದ ಆಹದ್ ಫಾಜಿಲ್ ಮತ್ತು ಜಿಯಾ ಪಾವಲ್ ಅವರ ಪುರುಷ ಸಂಗಾತಿ ಜಹದ್ ಫಾಜಿಲ್ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ದಂಪತಿಯ ಮೆಟರ್ನಿಟಿ ಫೋಟೋಶೂಟ್ ಚಿತ್ರಗಳನ್ನು ಜಿಯಾ ಪಾವಲ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಎಂಟು ತಿಂಗಳ ಗರ್ಭಿಣಿಯಾಗಿರುವ ಜಹದ್ ಶೀಘ್ರ ಚೊಚ್ಚಲ ಮಗುವಿಗೆ ಜನ್ಮ ನೀಡಲಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.