ಬೆಂಗಳೂರು, ಫೆ 02 ( DaijiworldNews/SM): ಸಂಚಾರಿ ನಿಯಮಗಳು ಅನೇಕ ಬಾರಿ ತಿಳಿದೋ ತಿಳಿಯದೆಯೋ ಉಲ್ಲಂಘನೆಯಾಗುತ್ತಿದೆ. ಹೀಗೆ ಉಲ್ಲಂಘನೆಯಾದವರಿಗೆ ದಂಡ ಪಾವತಿಸಲು ಸಾರಿಗೆ ಇಲಾಖೆ ಭರ್ಜರಿ ಆಫರ್ ನೀಡಿದೆ.
ದಂಡ ಕಟ್ಟದೆ ಬಾಕಿ ಉಳಿದುಕೊಂಡವರಿಗೆ ಶೇಕಡಾ 50ರಷ್ಟು ರಿಯಾಯಿತಿ ಸಿಗಲಿದೆ. ಇದಕ್ಕಾಗಿ ಫೆಬ್ರವರಿ 11ರ ತನಕ ಅವಕಾಶ ಕಲ್ಪಿಸಲಾಗಿದೆ. ಫೆಬ್ರವರಿ 11ರೊಳಗೆ ಪಾವತಿಸಿದವರಿಗೆ ಶೇ. ಐವತ್ತರಷ್ಟು ರಿಯಾಯಿತಿ ಸಿಗಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಫೆಬ್ರವರಿ 11ರಂದು ಲೋಕ ಅದಾಲತ್ ನಡೆಯಲಿರುವ ಹಿನ್ನಲೆ ದಂಡ ಪಾವತಿಯಲ್ಲಿ ರಿಯಾಯ್ತಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ವೀರಪ್ಪ ಮನವಿ ಮಾಡಿದ್ದರು.
ಅದರಂತೆ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಶೇಕಡ 50ರಷ್ಟು ರಿಯಾಯ್ತಿ ನೀಡಿ ಆದೇಶ ಹೊರಡಿಸಿದ್ದಾರೆ. ಇನ್ನು ಫೆಬ್ರವರಿ 11ರೊಳಗೆ ಕಟ್ಟಲು ಸಾಧ್ಯವಾಗದಿದ್ದರೆ ಫೆಬ್ರವರಿ 11ರ ನಂತರ ಸಂಪೂರ್ಣ ದಂಡದ ಮೊತ್ತ ಪಾವತಿಸಬೇಕಾಗುತ್ತದೆ.