ಹೈದ್ರಾಬಾದ್, ಫೆ 03 (DaijiworldNews/HR): ಹಿರಿಯ ಹೆಸರಾಂತ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ, ಕಲಾತಪಸ್ವಿ ಕೆ.ವಿಶ್ವನಾಥ್ (92) ಅವರು ಗುರುವಾರ ರಾತ್ರಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಟಾಲಿವುಡ್ ನಲ್ಲಿ ‘ಕಲಾ ತಪಸ್ವಿ’ ಎಂದೇ ಹೆಸರುವಾಸಿಯಾಗಿದ್ದ ಕೆ.ವಿಶ್ವನಾಥ್ ಕಳೆದ ಕೆಲ ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಇನ್ನು 1951 ರಲ್ಲಿ ತೆಲುಗು-ತಮಿಳು ಚಲನಚಿತ್ರ .ಪಾತಾಳ ಭೈರವಿ' ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು 1965 ರಲ್ಲಿ 'ಆತ್ಮ ಗೌರವಂ' ಮೂಲಕ ನಿರ್ದೇಶಕನಾಗಿ ಕಾಲಿಟ್ಟರು. ಆ ಬಳಿಕ ಅವರ ನಿರ್ದೇಶನದ 'ಶಂಕರಾಭರಣಂ' ಸಿನಿಮಾ ಆ ಕಾಲದಲ್ಲಿ ಸೂಪರ್ ಹಿಟ್ ಆಗಿ, ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.