ಕಲ್ಲಿಕೋಟೆ, ಫೆ 03 (DaijiworldNews/DB): ಅಬುಧಾಬಿಯಿಂದ ಕೇರಳದ ಕಲ್ಲಿಕೋಟೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಬುಧಾಬಿಯಲ್ಲೇ ಮತ್ತೆ ವಿಮಾನ ಇಳಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸಂಖ್ಯೆ ಐಎಕ್ಸ್ 348 ಅಬುದಾಬಿಯಿಂದ ಇಂದು ಬೆಳಗ್ಗೆ ಒಟ್ಟು 184 ಪ್ರಯಾಣಿಕರನ್ನು ಹೊತ್ತು ಕಲ್ಲಿಕೋಟೆಗೆ ಟೇಕಾಫ್ ಆಗಿತ್ತು. ಆದರೆ ಆ ವೇಳೆಗಾಗಲೇ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಪೈಲಟ್ ವಿಮಾನವನ್ನು ಅಬುಧಾಬಿಗೆ ತಿರುಗಿಸಿ ಇಳಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದರು. ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ತಿಳಿಸಿದ್ದಾರೆ.
ವಿಮಾನದ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 1000 ಅಡಿಗಳಷ್ಟು ಎತ್ತರ ಹೋದಾಗ ನಂ.1 ಎಂಜಿನ್ ಫ್ಲೇಮ್ಔಟ್ನಿಂದ ಏರ್ಟರ್ನ್ಬ್ಯಾಕ್ನಲ್ಲಿ ಬೆಂಕಿ ಕಾಣಿಸಿರಕೊಂಡಿತು ಎಂದವರು ತಿಳಿಸಿರುವುದಾಗಿ ವರದಿಯಾಗಿದೆ.