ನವದೆಹಲಿ, ಫೆ 04 ( DaijiworldNews/MS): 2009 ಮತ್ತು 2019 ರ ನಡುವೆ ಲೋಕಸಭೆಗೆ ಪುನರಾಯ್ಕೆಯಾದ 71 ಸಂಸದರ ಆಸ್ತಿ ಸರಾಸರಿ ಶೇ.286 ರಷ್ಟು ಏರಿಕೆಯಾಗಿದ್ದು ಇದರನ್ನು ಆ ಪೈಕಿ ಅತಿಹೆಚ್ಚು ಏರಿಕೆ ಕಂಡ ನಾಯಕರ ಪಟ್ಟಿಯಲ್ಲಿ ಬಿಜಾಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಟಾಪ್ನಲ್ಲಿದ್ದಾರೆ ಎಂದುಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.
2009 ರಲ್ಲಿ ಸುಮಾರು 1.18 ಕೋಟಿ ರೂ.ಗಳಷ್ಟಿದ್ದ ಜಿಗಜಿಣಗಿ ಅವರ ಆಸ್ತಿಯ ಒಟ್ಟು ಮೌಲ್ಯವು 2014 ರಲ್ಲಿ 8.94 ಕೋಟಿ ರೂ.ಗಳಿಗೆ ಮತ್ತು 2019 ರಲ್ಲಿ 50.41 ಕೋಟಿ ರೂ.ಗೆ ಏರಿದ್ದು, ಒಟ್ಟಾರೆ ಶೇ.4,189 ರಷ್ಟು ಹೆಚ್ಚಳ ಕಂಡಿದೆ.
ನಂತರದ ಸ್ಥಾನದಲ್ಲಿ ಬೆಂಗಳೂರಿನ ಪಿ.ಸಿ ಮೋಹನ್ ಇದ್ದು, 5.37 ಕೋಟಿಯಿಂದ 75.55 ಕೋಟಿಗೆ ಹೆಚ್ಚಳವಾಗಿದೆ. ಬಿಜೆಪಿ ಎಂಪಿ ವರುಣ್ ಗಾಂಧಿ ಆಸ್ತಿ ಕೂಡ 4.92ರಿಂದ 60.32 ಕೋಟಿಗೆ ಜಿಗಿದಿದೆ ಎಂದು ಸಂಸ್ಥೆ ಬಹಿರಂಗಪಡಿಸಿದೆ.