ಮೈಸೂರು, ಫೆ 06 ( DaijiworldNews/MS): ಮೂಲ ಕಾಂಗ್ರೆಸಿಗರ ಹಿತ ಕಾಯುವುದೇ ನನ್ನ ಕೆಲಸ . ಯಾರಿಗೆ ಯಾರು ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದರು.
ಮಾಜಿ ಶಾಸಕ ವಾಸು ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಔಪಚಾರಿಕ ಸಮಾಲೋಚನೆ ನಡೆಸಿದ ಬಳಿಕಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ವಾಸು ಅವರಿಗೆ ಚಾಮರಾಜ ಕ್ಷೇತ್ರದಲ್ಲಿ ಟಿಕೆಟ್ ಖಚಿತ, ಅವರಿಗೆ ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನಾನು ಮತ್ತು ಮಾಜಿ ಶಾಸಕ ವಾಸು ಮೂಲ ಕಾಂಗ್ರೆಸ್ಸಿಗರು. ವಾಸು ಚಾಮ ರಾಜ ಕ್ಷೇತ್ರಕ್ಕೆ ಬಲಿಷ್ಠ ಅಭ್ಯರ್ಥಿ. ಮೊದಲ ಪಟ್ಟಿಯಲ್ಲಿ ವಾಸು ಅವರ ಹೆಸರು ಇರುತ್ತದೆ .ಕಾಂಗ್ರೆಸ್ ನಲ್ಲಿ ಯಾವುದೇ ಬಣ ಇಲ್ಲ . ಇರುವುದೊಂದೇ ಬಣ ಅದು 'ಕಾಂಗ್ರೆಸ್' ಎಂದು ಹೇಳಿದರು