ಭೋಪಾಲ್, ಫೆ 06 ( DaijiworldNews/MS): ಸರ್ಕಾರದ ವಿರುದ್ಧ ಪಿತೂರಿ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇಲೆ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನ ಮೂವರು ಸದಸ್ಯರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಮೂವರು ಆರೋಪಿಗಳನ್ನು ಧಾರ್ ಜಿಲ್ಲೆಯ ನಿವಾಸಿ ಗುಲಾಮ್ ರಸೂಲ್ ಶಾ (37), ಇಂದೋರ್ ನಿವಾಸಿ ಸಾಜಿದ್ ಖಾನ್ ಅಕಾ ಗುಲಾಂ ನಬಿ (56), ಮತ್ತು ಔರಂಗಾಬಾದ್ನ ಪರ್ವೇಜ್ ಖಾನ್ (30) ಎಂದು ಗುರುತಿಸಲಾಗಿದೆ
ಆರೋಪಿಗಳ ಪೈಕಿ ಪರ್ವೇಜ್ ಖಾನ್ ಈಗಾಗಲೇ ಔರಂಗಾಬಾದ್ನ ಜೈಲಿನಲ್ಲಿದ್ದು, ವಾರಂಟ್ ಮೇಲೆ ಶನಿವಾರ ಭೋಪಾಲ್ಗೆ ಕರೆತರಲಾಯಿತು
ಪರ್ವೇಜ್ ಖಾನ್ 2017 ರಿಂದ PFI ಯೊಂದಿಗೆ ನಂಟು ಹೊಂದಿದ್ದು, ಹಲವಾರು ಸಂದರ್ಭಗಳಲ್ಲಿ ಪಿಎಫ್ಐ ಸದಸ್ಯರಿಗೆ ತರಬೇತಿ ನೀಡಲು ನಿಷೇಧಿತ ಸಂಘಟನೆಯ ಬೋಧಕರಾಗಿ ಮಧ್ಯಪ್ರದೇಶಕ್ಕೆ ಬಂದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮತ್ತೋರ್ವ ಆರೋಪಿ ಗುಲಾಂ ರಸೂಲ್ಪಿಎಫ್ಐನ ಸಕ್ರಿಯ ಸದಸ್ಯನಾಗಿದ್ದು ರಾಜ್ಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಸಂಘಟನೆಗಾಗಿ ಕೆಲಸ ಮಾಡಲು ಜನರನ್ನು ಪ್ರೇರೇಪಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.