ಮುಂಬಯಿ, ಫೆ 05 (DaijiworldNews/HR): ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ ಪತ್ನಿ ಮೇಲೆ ಹಲ್ಲೆ ನಡೆಸಿ ನಿಂದಿಸಿದ ಆರೋಪದ ಮೇಲೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 324,504 ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕುಡಿದು ಮನೆಗೆ ಬಂದ ವಿನೋದ್ ಕಾಂಬ್ಳಿ ಪತ್ನಿಯನ್ನು ಕೆಟ್ಟದಾಗಿ ನಿಂದಿಸಿದ್ದು, ಇದಾದ ಬಳಿಕ ಸಿಟ್ಟಿನಲ್ಲಿ ಅಡುಗೆಯ ಕಾವಲಿಯನ್ನು ಪತ್ನಿಯ ಮೇಲೆ ಎಸೆದಿದ್ದು, ಇದರಿಂದ ಪತ್ನಿ ಆಂಡ್ರಿಯಾ ತಲೆಗೆ ಗಾಯವಾಗಿದೆ.
ಇನ್ನು ಅವರ 12 ವರ್ಷದ ಮಗ ತಂದೆಯನ್ನು ತಡೆಯಲು ಯತ್ನಿಸಿದ್ದು, ಇದರ ಬಳಿಕವೂ ಕುಡಿದ ಮತ್ತಿನಲ್ಲಿ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಪತ್ನಿ ದೂರಿನಲ್ಲಿ ಹೇಳಿದ್ದಾರೆ.
ಗಾಯಗೊಂಡ ಆಂಡ್ರಿಯಾ ಚಿಕಿತ್ಸೆ ಪಡೆದು ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ.