ನವದೆಹಲಿ, ಫೆ 06 ( DaijiworldNews/MS): ಚೀನಾದೊಂದಿಗೆ ಲಿಂಕ್ ಹೊಂದಿರುವ 138 ಬೆಟ್ಟಿಂಗ್ ಅಪ್ಲಿಕೇಶನ್ಗಳು ಮತ್ತು ಲೋನ್ ನೀಡುವ 94 ಅಪ್ಲಿಕೇಶನ್ಗಳನ್ನು “ತುರ್ತು ಮತ್ತು ತ್ವರಿತ” ಆಧಾರದ ಮೇಲೆ ನಿಷೇಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದಾಗಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಭಾನುವಾರ ಹೇಳಿದೆ.
ಈ ಅಪ್ಲಿಕೇಶನ್ಗಳು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿ ಉಂಟುಮಾಡುತ್ತಿದ್ದು, ಗೃಹ ಸಚಿವಾಲಯ ನೀಡಿದ ಸೂಚನೆ ಮೇರೆಗೆ ಈ ಅಪ್ಲಿಕೇಶನ್ಗಳನ್ನು ನಿಷೇಧಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2022 ರಲ್ಲಿ, ರಾಷ್ಟ್ರದ ಭದ್ರತೆಗೆ ಅಪಾಯವನ್ನುಂಟುಮಾಡುವ 54 ಚೀನೀ ಅಪ್ಲಿಕೇಶನ್ಗಳನ್ನು ಕೇಂದ್ರವು ನಿಷೇಧಿಸಿತು. 2020 ರಿಂದ ಒಟ್ಟಾರೆಯಾಗಿ 270 ಅಪ್ಲಿಕೇಶನ್ಗಳನ್ನು ಸರ್ಕಾರವು ನಿಷೇಧಿಸಿದೆ. ಮೂಲಗಳ ಪ್ರಕಾರ, ಈ ಆ್ಯಪ್ಗಳು ಭಾರತೀಯರ ಸೂಕ್ಷ್ಮ ಡೇಟಾವನ್ನು ಚೀನಾದಂತಹ ವಿದೇಶಗಳಲ್ಲಿನ ಸರ್ವರ್ಗಳಿಗೆ ವರ್ಗಾಯಿಸುತ್ತಿವೆ ಎಂಬ ಆಧಾರದ ಮೇಲೆ ನಿಷೇಧವನ್ನು ಹೊರಡಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಇದಕ್ಕೆ ನಿಷೇಧಿಸಲಾಗಿದೆ