ಬೆಂಗಳೂರು, ಫೆ 06 ( DaijiworldNews/MS): ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬ್ರಾಹ್ಮಣ ಮುಖ್ಯಮಂತ್ರಿ ಆಡಳಿತ ನಡೆಸುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುತ್ತದೆ. ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡಿ, ಬರೋಬ್ಬರಿ 8 ಮಂದಿಯನ್ನು ಡೆಪ್ಯೂಟಿ ಸಿಎಂ ಮಾಡಲು ಈಗಾಗಲೇ ಆರ್ ಎಸ್ಎಸ್ ಲೆಕ್ಕಚಾರ ಹಾಕಿದೆ" ಎಂದು ಹೇಳಿದ್ದಾರೆ
ಮುಂದಿನ ಸಿಎಂ ಬಗ್ಗೆ ನಿರ್ಧರಿಸಲು ದೆಹಲಿಯಲ್ಲಿ ಆರ್ ಎಸ್ಎಸ್ ಮುಖಂಡರ ಸಭೆ ನಡೆದಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ್ರೆ ಆರ್ ಎಸ್ಎಸ್ ನವರು ನಿರ್ಧಾರ ಮಾಡಿರುವ ಹಾಗೆ ಪ್ರಹ್ಲಾದ್ ಜೋಶಿ ಅವರೇ ಮುಂದಿನ ಸಿಎಂ ಆಗುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಬಿಜೆಪಿ ಕಳ್ಳಾಟಕ್ಕೆ ಬಲಿಯಾಗಬೇಡಿ ಎಂದು ಹೇಳಿದ್ದಾರೆ.