ಬೆಂಗಳೂರು, ಫೆ 06 ( DaijiworldNews/MS): ರಾಜ್ಯ ರಾಜಧಾನಿಯಲ್ಲಿ ಬರ್ತ್ ಕಂಟ್ರೋಲ್ ಶಸ್ತ್ರ ಚಿಕಿತ್ಸೆಯ ಬಳಿಕ 85 ಶ್ವಾನಗಳು ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದೆ.
ಜನನ ನಿಯಂತ್ರಣ ಶಸ್ತ್ರ ಚಿಕಿತ್ಸೆ ನಂತರ ಸರಿಯಾದ ವೈದ್ಯಕೀಯ ಸಹಾಯ ಸಿಗದೆ ವೈದ್ಯರ ನಿರ್ಲಕ್ಯಕ್ಕೆ ಶ್ವಾನಗಳು ಸಾವನ್ನಪ್ಪಿದೆ ಎಂದು ನೆವೀನಾ ಕಾಮತ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸೋಂಕುಗಳನ್ನು ತಡೆಯುವ ಮತ್ತು ರೋಗ ನಿರೋಧಕ ವ್ಯಾಕ್ಸೀನ್ ಗಳು ಸಿಗದೆ ಹಲವಾರು ಶ್ವಾನಗಳು ಬಲಿಯಾಗಿದೆ ಇದರೊಂದಿಗೆ ಶಸ್ತ್ರ ಚಿಕಿತ್ಸೆ ನಂತರ ಸರಿಯಾದ ವೈದ್ಯಕೀಯ ಸಹಾಯ ಸಿಗದೆ ಶ್ವಾನಗಳು ಸಾಯುತ್ತಿವೆ. ಪಶೋಸಂಗೋಪನಾ ಇಲಾಖೆಯ ವೈದ್ಯರು ಹಾಗೂ ಪಶೋಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ ಎಂ.ಜಿ ಹಳ್ಳಿ ಶಿವರಾಂ ಅವರು ಇದಕ್ಕೆ ನೇರ ಹೊಣೆ ಎಂದು ದೂರಿದ್ದಾರೆ
ಶಸ್ತ್ರ ಚಿಕಿತ್ಸೆ ನಂತರ ಶ್ವಾನಗಳ ಕಾಳಜಿ ಸರಿಯಾಗಿ ವಹಿಸದೆ ತಂದು ಬೀದಿಯಲ್ಲಿ ಬಿಟ್ಟಿರುವದರಿಂದ ಶ್ವಾನಗಳು ಸಾಯುತ್ತಿದ್ದು, ಈ ವಿಚಾರವನ್ನು ನಾಯಿಗಳಿಗೆ ಆಹಾರ ನೀಡುವವರು ನನಗೆ ತಿಳಿಸಿದ್ದಾರೆ. ಇದಲ್ಲದೆ ಬಿಬಿಎಂಪಿ ಎಬಿಸಿ(ಶ್ವಾನ) ನಿಯಮ, 2001 ಕಾಯ್ದೆ ಅಡಿಯಲ್ಲಿ ಬರುವ ನಿಯಮಗಳನ್ನು ಪಾಲಿಸದೆ 85 ಶ್ವಾನಗಳು ಬಲಿಯಾಗಿವೆ ಎಂದು ಆರೋಪಿಸಿದ್ದಾರೆ
ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ(Prevention of Animal Act)ಯಲ್ಲಿ ದಾಖಲಿಸಿಕೊಂಡಿದ್ದಾರೆ.