ಚಿಕ್ಕಮಗಳೂರು, ಫೆ 05 (DaijiworldNews/HR): ಪಾಕಿಸ್ತಾನದಲ್ಲಿ ಕಾಂಗ್ರೆಸ್ನವರು ಸರ್ವೆ ನಡೆಸಿದರೆ 150 ರಿಂದ 200 ಸ್ಥಾನಗಳು ಬರಬಹುದು. ಆದರೆ ಅದು ಕರ್ನಾಟಕದಲ್ಲಿ, ಭಾರತದಲ್ಲಿ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ಸರ್ವೇ ಕುರಿತು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವೋಟು ದಿನೇ ದಿನೇ ಕಡಿಮೆ ಆಗುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಡಿಪಾಸಿಟ್ ಉಳಿಸಿಕೊಳ್ಳುವುದು ಕಷ್ಟ ಎನ್ನುವ ಸ್ಥಿತಿಗೆ ಬಂದಿದೆ ಎಂದರು.
ಇನ್ನು ಸುಳ್ಳು ಯಾರು ಹೇಳುತ್ತಾರೆಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಚಿಕ್ಕಮಗಳೂರು ಜಿಲ್ಲೆಗೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜು ರದ್ದು ಮಾಡಿದರು. ದತ್ತಪೀಠಕ್ಕೆ ಮೋಸ ಮಾಡಿದರು. ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಗ್ಯಾಂಗ್ ಬೆಂಬಲಿಸಿದರು. ಎಸ್ಡಿಪಿಐ ಮೇಲಿನ ಕೇಸ್ ಹಿಂಪಡೆದರು ಅವರು ಎಂದು ವಾಗ್ದಾಳಿ ನಡೆಸಿದ್ದಾರೆ.