ಮುಂಬೈ, ಫೆ 07 ( DaijiworldNews/MS): ದೇಶದಲ್ಲಿ ಆತ್ಮಸಾಕ್ಷಿ ಮತ್ತು ಪ್ರಜ್ಞೆ ಒಂದೇ, ಅಭಿಪ್ರಾಯಗಳು ಮಾತ್ರ ಭಿನ್ನವಾಗಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದರು.
ರವೀಂದ್ರ ನಾಟ್ಯ ಮಂದಿರದ ಸಭಾಂಗಣದಲ್ಲಿ ಸಂತ ಶಿರೋಮಣಿ ರೋಹಿದಾಸರ 647ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ನಾವು ಕೆಲಸವನ್ನು ಪಡೆದಾಗ, ನಮಗೆ ಸಮಾಜದ ಬಗ್ಗೆ ಜವಾಬ್ದಾರಿಯೂ ಇರುತ್ತದೆ. ಪ್ರತಿಯೊಂದು ಕೆಲಸವು ಸಮಾಜದ ಹೆಚ್ಚಿನ ಒಳಿತಿಗಾಗಿ ಇರುವಾಗ, ಯಾವುದೇ ಕೆಲಸವು ದೊಡ್ಡದು, ಚಿಕ್ಕದೆಂದು ಹೇಗಿರುತ್ತದೆ ? ಅಥವಾ ಹೇಗೆ ವಿಭಿನ್ನವಾಗಿರುತ್ತದೆ?" ಎಂದು ಭಾಗವತ್ ಹೇಳಿದರು.
"ಭಗವಂತನಿಗೆ ನಾವು ಸಮಾನರು. ಯಾವುದೇ ಜಾತಿ ಅಥವಾ ಪಂಥವಿಲ್ಲ. ಪುರೋಹಿತ ವರ್ಗಗಳು ಈ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿದ್ದು, ಇದು ತಪ್ಪು. ದೇಶದಲ್ಲಿ ಆತ್ಮಸಾಕ್ಷಿ ಮತ್ತು ಪ್ರಜ್ಞೆ ಒಂದೇ ಆಗಿರುತ್ತದೆ ಮತ್ತು ಅಭಿಪ್ರಾಯಗಳು ಮಾತ್ರ ವಿಭಿನ್ನವಾಗಿವೆ" ಎಂದು ಅವರು ಅಭಿಪ್ರಾಯಪಟ್ಟರು.
ಧರ್ಮವೆಂದರೆ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ ಎಂದು ಸಂತ ರೋಹಿದಾಸರು ಹೇಳಿರುವುದನ್ನು ನೆನಪಿಸಿಕೊಳ್ಳಬೇಕು. ಅವರು " ನಿಮ್ಮ ಕೆಲಸವನ್ನು ಮಾಡಿ ಮತ್ತು ಅದನ್ನು ನಿಮ್ಮ ಧರ್ಮಕ್ಕೆ ಅನುಗುಣವಾಗಿ ಮಾಡಿ. ಸಮಾಜವನ್ನು ಒಗ್ಗೂಡಿಸಿ ಮತ್ತು ಅದರ ಪ್ರಗತಿಗಾಗಿ ಕೆಲಸ ಮಾಡಿ, ಅದು ಧರ್ಮದ ವಿಷಯವಾಗಿದೆ" ಎಂದು ಹೇಳಿದ್ದರು. ಅದಕ್ಕೆ ತುಳಸಿದಾಸ್, ಕಬೀರ್ ಮತ್ತು ಸೂರದಾಸ್ ಏರಲಾಗದ ಎತ್ತರವನ್ನು "ಸಂತ ರೋಹಿದಾಸ್"ಏರಿದ್ದರು. ಇದಕ್ಕಾಗಿಯೇ ಅವರನ್ನು ಸಂತ ಶಿರೋಮಣಿ ಎಂದು ಪರಿಗಣಿಸಲಾಗಿದೆ" ಎಂದು ಹೇಳಿದರು.