ಲಕ್ನೋ, ಫೆ 06 (DaijiworldNews/HR): ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಪುರಿ ಚೌಧರಿ ಗ್ರಾಮದಲ್ಲಿ 6 ಮಕ್ಕಳ ತಂದೆಯೊಬ್ಬ 23 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ ಘಟನೆ ನಡೆದಿದೆ.
ನಖೇದ್ ಯಾದವ್ ಕಳೆದ ಕೆಲ ವರ್ಷಗಳಿಂದ, ಪತ್ನಿ ನಿಧನದ ಬಳಿಕ ಒಂಟಿ ಜೀವನವನ್ನು ನಡೆಸುತ್ತಿದ್ದು, ತನ್ನ 6 ಹೆಣ್ಣು ಮಕ್ಕಳೊಂದಿಗೆ ವಾಸುತ್ತಿರುವ 65 ವರ್ಷದ ನಖೇಶ್ ಯಾದವ್ ಈಗ ಎಲ್ಲರ ಸಮ್ಮುಖದಲ್ಲಿ 23 ವರ್ಷದ ನಂದಿನಿ ಯಾದವ್ ಎಂಬ ಯುವತಿಯನ್ನು ಮದುವೆಯಾಗಿದ್ದಾರೆ.
ಇತ್ತೀಚೆಗೆ ವೈಯಕ್ತಿಕ ಕೆಲಸದ ನಿಮಿತ್ತ ರಾಂಚಿಗೆ ಹೋಗುವಾಗ ಅಲ್ಲಿ ಯುವತಿಯ ಪರಿಚಯವಾಗಿ ದಿನ ಕಳೆದಂತೆ ಪ್ರೇಮಕ್ಕೆ ತಿರುಗುತ್ತದೆ. ಇದೀಗ ಇಬ್ಬರು ಮಕ್ಕಳ, ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.