ಬೆಂಗಳೂರು, ಫೆ 07 ( DaijiworldNews/MS): ಕನ್ನಡಿಗ, ಬೆಂಗಳೂರು ಮೂಲದ ಸಂಗೀತ ಸಂಯೋಜಕ ರಿಕಿ ಕೇಜ್ ಮೂರನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಿಕಿ ಕೇಜ್ ಅವರು ರಾಕ್-ಲೆಜೆಂಡ್ ಸ್ಟೀವರ್ಟ್ ಕೊಪ್ಲ್ಯಾಂಡ್ (ದಿ ಪೊಲೀಸ್) ಅವರ ಇತ್ತೀಚಿನ ಆಲ್ಬಂ ಡಿವೈನ್ ಟೈಡ್ಸ್ಗಾಗಿ ಬೆಸ್ಟ್ ಇಮ್ಮರ್ಸಿವ್ ಆಡಿಯೋ ಆಲ್ಬಮ್ಗಾಗಿ ಗ್ರ್ಯಾಮಿ ಪಡೆದಿದ್ದಾರೆ.
ಸ್ಟೀವರ್ಟ್ ಕೋಪ್ಲ್ಯಾಂಡ್ ಅವರು ಆಲ್ಬಮ್ನಲ್ಲಿ ರಿಕಿ ಅವರೊಂದಿಗೆ ಕೆಲಸ ಮಾಡಿದ್ದರು. 65ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಯ ‘ತಲ್ಲೀನಗೊಳಿಸುವ ಅತ್ಯುತ್ತಮ ಆಡಿಯೊ ಆಲ್ಬಮ್ - ‘ದಿ ಬೆಸ್ಟ್ ಇಮ್ಮರ್ಸಿವ್ ಆಲ್ಬಮ್’ ವಿಭಾಗದಲ್ಲಿ ಈ ಇಬ್ಬರೂ ‘ಗ್ರಾಮಫೋನ್ ಟ್ರೋಫಿಯನ್ನು’ಯನ್ನು ತಮ್ಮದಾಗಿಸಿಕೊಂಡಿದ್ದಾರೆ
"ಈಗಷ್ಟೇ ನನ್ನ 3ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದೇನೆ. ಅತ್ಯಂತ ಕೃತಜ್ಞನಾಗಿದ್ದೇನೆ, ನಾನು ಮೂಕ ವಿಸ್ಮಿತನಾಗಿದ್ದೇನೆ! ನಾನು ಈ ಪ್ರಶಸ್ತಿಯನ್ನು ಭಾರತಕ್ಕೆ ಅರ್ಪಿಸುತ್ತೇನೆ" ಎಂದು ರಿಕಿ ಕೇಜ್ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ‘ದಿ ಬೆಸ್ಟ್ ನ್ಯೂ ಏಜ್ ಆಲ್ಬಮ್’ ವಿಭಾಗದಲ್ಲಿ ಇದೇ ಆಲ್ಬಮ್ಗಾಗಿ ಅವರು ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದರು.