ನವದೆಹಲಿ, ಫೆ 06 (DaijiworldNews/HR): ಈಶಾನ್ಯ ಭಾಗದ ಹಿಂದುಳಿದ ಪ್ರದೇಶಗಳಿಗೆ ಕನಿಷ್ಠ ಸಂಖ್ಯೆಯ ಕಡ್ಡಾಯ ವಿಮಾನಗಳನ್ನು ನಿರ್ವಹಿಸಲು ವಿಫಲವಾಗಿರುವುದಕ್ಕಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ(ಡಿಜಿಸಿಎ) ವಿಸ್ತಾರ ಏರ್ಲೈನ್ಸ್ 70 ಲಕ್ಷ ದಂಡ ಪಾವತಿಸಿರುವುದಾಗಿ ವರದಿಯಾಗಿದೆ.
ಈಶಾನ್ಯ ರಾಜ್ಯಗಳ ಹಿಂದುಳಿದ ಪ್ರದೇಶಗಳಿಗೆ ಕನಿಷ್ಠ ಸಂಖ್ಯೆಯ ಕಡ್ಡಾಯ ವಿಮಾನಗಳನ್ನು ನಿರ್ವಹಿಸದಿದ್ದಕ್ಕಾಗಿ ವಿಸ್ತಾರ ಏರ್ಲೈನ್ಸ್ ಗೆ ವಿಮಾನಯಾನ ಸಂಸ್ಥೆ ದಂಡ ವಿಧಿಸಿದ್ದು, ಇದೀಗ ದಂಡವನ್ನು ಪಾವತಿ ಮಾಡಿದೆ.
ಇನ್ನು ವಿಸ್ತಾರ ಸಂಸ್ಥೆ ಸರ್ಕಾರದ ಆದೇಶಗಳನ್ನು ಮತ್ತು ಕಾನೂನು ಪಾಲನೆ ಮಾಡುತ್ತಿದ್ದು, ಒಂದು ವಿಮಾನವನ್ನು ನಿರ್ವಹಿಸದಿರುವುದಕ್ಕೆ ಸಂಸ್ಥೆ ದಂಡ ಪಾವತಿಸಿದೆ ಎಂದು ವಿಸ್ತಾರ ವಕ್ತಾರರು ತಿಳಿಸಿದ್ದಾರೆ.