ಶಿವಮೊಗ್ಗ, ಫೆ. 5 (DaijiworldNews/SM): ಹಿಂದೂ-ಹಿಂದುತ್ವ ಅನ್ನೋದು ಒಂದೇ ನಾಣ್ಯದ ಎರಡು ಮುಖ. ಸನಾತನ ಧರ್ಮ ಬೇರೆ ಅಲ್ಲ. ಹಿಂದೂ, ಹಿಂದುತ್ವ ಬೇರೆ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಹಿಂದುತ್ವದ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸೊರಬದಲ್ಲಿ ಪ್ರತಿಕ್ರಿಯಿಸಿ, ಹಿಂದುತ್ವ ಎಲ್ಲವನ್ನೂ ಒಪ್ಪಿಕೊಳ್ಳುವಂತದ್ದು.ದೇವನೊಬ್ಬ ನಾಮ
ಹಲವು ಎಂಬ ತತ್ವ ಹಿಂದುತ್ವದಲ್ಲಿದೆ. ಹಿಂದೂ ಎಲ್ಲಾರಲ್ಲೂ ಕೂಡ ಸಮಾನತೆ ಬಯಸುತ್ತಾನೆ. ಇವರು ಸಮಾನತೆಯನ್ನು ಬಯಸಲ್ಲ. ಜಾತಿ ಸಮಾನತೆ ಬಯಸಲ್ಲ. ಸಿದ್ದರಾಮಯ್ಯ ಹಿಂದುತ್ವ ಒಪ್ಪಲ್ಲ ಅಂದರೆ
ಸಮಾನತೆ ಬೇಕಾಗಿಲ್ಲ ಎಂದು ಅರ್ಥ. ಅವರಿಗೆ ಜಾತೀಯತೆ, ಅಸ್ಪೃಶ್ಯತೆ ಬೇಕು.ಅದಕ್ಕಾಗಿಯೇ ಅವರು ಪರಮೇಶ್ವರ್ ಸೋಲಿಸುವ ಕೆಲಸ ಮಾಡಿದರು ಎಂದು ಕಿಡಿ ಕಾರಿದರು. ಸಮಾನತೆ ಬಯಸದ ಅವರು ಹಿಂದುತ್ವ ಒಪ್ಪಿಕೊಳ್ಳದಿರುವುದು ಸರಿ ಇದೆ. ಜಾತಿ ಬೇಳೆ ಬೇಯಿಸುವ ರಾಜಕೀಯ ಮಾ ಡುತ್ತಿರುವುದು ಅವರ ಹೇಳಿಕೆಯಿಂದ ಸ್ಪಷ್ಟ ಎಂದರು.