ಬೆಂಗಳೂರು,ಫೆ 07 ( DaijiworldNews/MS):ಮುಂಬರುವ ವಿಧಾನಸಭೆ ಚುನಾವಣಾ ಅಖಾಡ ಜೋರಾಗಿದ್ದು, ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಕಾಂಗ್ರೆಸ್ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಇದಕ್ಕಾಗಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪಟ್ಟಿಯನ್ನು ಅಂತಿಮಗೊಳಿಸುವ ಕುರಿತಂತೆ ಕೆಲವು ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ.
120ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಹುತೇಕ ಪೂರ್ಣಗೊಂಡಿದ್ದು ಈ ಪಟ್ಟಿಯು ಶೀಘ್ರದಲ್ಲಿ ವರಿಷ್ಠರ ಕೈ ಸೇರುವುದಷ್ಟೇ ಬಾಕಿಯಿದೆ. ಮೊದಲ ಹಂತದ ಪಟ್ಟಿ ಸಿದ್ಧಪಡಿಸಲು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಮಹತ್ವದ ಸಭೆಯನ್ನ ಇತ್ತೀಚೆಗಷ್ಟೇ ನಡೆದಿತ್ತು. ಆದರೆ, ಗೊಂದಲ ನಿರ್ಮಾಣ ಆಗಬಹುದೆಂಬ ಕಾರಣಕ್ಕೆ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿರಲಿಲ್ಲ.
ಟಿಕೆಟ್ಗಾಗಿ ಆಕಾಂಕ್ಷಿಗಳಿಂದ ಒತ್ತಡ ಹೆಚ್ಚುತ್ತಿದ್ದು, ಇದೇ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರು ನಾಯಕರು, "ಹೈಕಮಾಂಡ್ ನಿರ್ಣಯವೇ ಅಂತಿಮ ಗೆಲುವಿನ ಮಾನದಂಡವನ್ನಷ್ಟೇ ಹೈಕಮಾಂಡ್ ಪರಿಗಣಿಸಲಿದೆ " ಎಂದು ಹೇಳುತ್ತಿದ್ದು, ಈಗಾಗಲೇ ಅಂತಿಮಗೊಳಿಸಲಾದ ಪಟ್ಟಿಯಲ್ಲಿ ಕೊನೆ ಕ್ಷಣದ ಬದಲಾವಣೆ ಹೊರತುಪಡಿಸಿ ಅದಷ್ಟೂ ಬೇಗ ಅಭ್ಯರ್ಥಿಗಳ ಪಟ್ಟಿ ವರಿಷ್ಠರ 'ಕೈ' ಸೇರಲಿದೆ