ನವದೆಹಲಿ, ಫೆ 07 (DaijiworldNews/HR): ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭಿಸಿದ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಿ ಅದರ ಚುನಾವಣಾ ಲಾಭವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮೋದಿ ನೇತೃತ್ವದ ಸರ್ಕಾರ ಫ್ರಾನ್ಸ್ ನಿಂದ ತಂದಿರುವುದು ರೆಡಿಮೇಡ್ ರಫೇಲ್ ಜೆಟ್. ಜವಹರಲಾಲ್ ನೆಹರೂರವರ ಆಡಳಿತಾವಧಿಯಲ್ಲಿಯೇ ಹಲವು ಕೈಗಾರಿಕೆಗಳು ಕರ್ನಾಟಕಕ್ಕೆ ಬಂದಿದ್ದವು ಎಂದರು.
ಇನ್ನು ಅದಾನಿ ಗ್ರೂಪ್ ವಿವಾದಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ನಡೆಯುತ್ತಿರುವ ಗದ್ದಲಕ್ಕೆ ಪ್ರತಿಕ್ರಿಯಿಸಿರುವ ಅವರು, ಅದಾನಿ ಗ್ರೂಪ್ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಜೆಪಿಸಿ ಅಥವಾ ಸಿಜೆಐ ನೇತೃತ್ವದ ತನಿಖಾ ತಂಡದಿಂದ ಸರಿಯಾದ ತನಿಖೆ ನಡೆಸಿ ಎಂದು ನಾವು ಕೇಳಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.