ಬೆಂಗಳೂರು,ಫೆ 07 ( DaijiworldNews/MS): ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ, ಅದಕ್ಕೆ ಪ್ರಾಶಸ್ತ್ಯವನ್ನು ನೀಡಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟಡಿಸಿದರು.
ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದಂತ ಅವರು, ಬಿಜೆಪಿ ನಾಯಕರ ಟೀಕೆಯನ್ನು ನಾನು ಗಮನಿಸಿದ್ದೇನೆ. ಸಾರ್ವಜನಿಕರಿಂದ ಅಹವಾಲು ಕೇಳುವಾಗಲೂ ಜಾತಿ ಕೇಳಿಲ್ಲ. ಯಾವುದೇ ಸಮುದಾಯಕ್ಕೂ ನಾನು ಅವಮಾನ ಮಾಡಿಲ್ಲ. ನಾನು ಸಿಟಿ ರವಿ ವಿಚಾರಕ್ಕೆ ಹೋಗಿಲ್ಲ, ಆದರೂ ನನ್ನ ಬಗ್ಗೆ ಟೀಕೆ ಮಾಡ್ತಾರೆ. ಸಿಟಿ ರವಿ ಇತಿಹಾಸ ಏನು ಅಂತ ರಾಜ್ಯದ ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು.
ಇಲ್ಲಿ ಎಲ್ಲದರೂ ಪರಿಶುದ್ಧ ಶಾಸಕರಿದ್ದಾರಾ ಎಂದು ಕಿಡಿಕಾರಿದ ಅವರು, ಬಿಜೆಪಿಯೇ ಅಲ್ಲದೇ ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಠಿ ಮಾಡಿರುವುದು ಎಂದು ವಾಗ್ಧಾಳಿ ನಡೆಸಿದರು.