ನವದೆಹಲಿ, ಫೆ 07 (DaijiworldNews/HR): ಟರ್ಕಿಯಲ್ಲಿ ಭೀಕರ ಭೂಕಂಪನದ ಪರಿಸ್ಥಿತಿ ನೆನೆದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದು, ಪ್ರವಾಹ ಪೀಡಿತ ದೇಶಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಸಂಸತ್ತಿನಲ್ಲಿ ಇಂದು ನಡೆದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೀಯ ಪಕ್ಷದ ಸಭೆಯಲ್ಲಿ ಟರ್ಕಿಯಲ್ಲಿನ ದುರಂತದ ಬಗ್ಗೆ ಪಕ್ಷದ ಸದಸ್ಯರಿಗೆ ತಿಳಿಸುವಾಗ ಪ್ರಧಾನಿ ಮೋದಿಯವರು ಭಾವುಕರಾಗಿದ್ದಾರೆ.
ಇನ್ನು ಸೋಮವಾರದಿಂದ ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಗಳು ಸಂಭವಿಸುತ್ತಲೆ ಇದ್ದು, ದುರ್ಘಟನೆಯಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಸಾಕಷ್ಟು ಜನರು ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.