ಬೆಂಗಳೂರು, ಫೆ 07 (DaijiworldNews/HR): ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಟೀಕೆ ಮಾಡುವಾಗ ಬ್ರಾಹ್ಮಣರ ವಿರುದ್ಧ ಮಾತನಾಡಿದ ಎಚ್ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಸಚಿವ ಆರ್.ಅಶೋಕ್ "ಭಾರತದ ಎಲ್ಲ ಬ್ರಾಹ್ಮಣರು ಒಂದೇ" ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಎಚ್ ಡಿ ಕುಮಾರಸ್ವಾಮಿಯವರೇ ಭಾರತದ ಎಲ್ಲ ಬ್ರಾಹ್ಮಣರು ಒಂದೇ. ಅವರು ಬ್ರಾಹ್ಮಣರು ಅಷ್ಟೇ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕದ ಬ್ರಾಹ್ಮಣರು ಎಂದು ವಿಂಗಡಣೆ ಮಾಡುತ್ತ, ನೀವು ಬ್ರಿಟಿಷರ ಹಾಗೆ ಒಡೆದು ಆಳುವ ನೀತಿ ಅನುಸರಿಸುತ್ತಿದ್ದೀರಿ ಎಂದಿದ್ದಾರೆ.
ಇನ್ನು ರಾಷ್ಟ್ರಕ್ಕೆ, ರಾಜ್ಯಕ್ಕೆ ಎಲ್ಲರಂತೆ ಬ್ರಾಹ್ಮಣ ಸಮಾಜದ ಕೊಡುಗೆಯು ಸಾಕಷ್ಟಿದೆ. ಸ್ವಭಾವತಃ ಸಾಧುಗಳಾದ ಬ್ರಾಹ್ಮಣರ ಮೇಲೆ ಮಾತನಾಡಿ, ಆ ಸಮಾಜಕ್ಕೆ ನೋವುಂಟುಮಾಡಿದ್ದಕ್ಕಾಗಿ ನೀವು ತಕ್ಷಣ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ.