ನವದೆಹಲಿಫೆ 08 (DaijiworldNews/HR): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ವರ್ಷದ ಮೊದಲ ಹಣಕಾಸು ನೀತಿ ವರದಿಯನ್ನು ಮಂಡಿಸಿದ್ದು, ರೆಪೋ ದರಗಳನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದ್ದಾರೆ.
ಫೆಬ್ರವರಿ 6,7 ಮತ್ತು 8 ರಂದು ಸ ಸಭೆ ನಡೆಸಿದ ಕೇಂದ್ರ ಬ್ಯಾಂಕ್ನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯು 25 ಬೇಸಿಸ್ ಪಾಯಿಂಟ್ಗಳಿಂದ ತಕ್ಷಣವೇ ಜಾರಿಗೆ ತರಲು ನಿರ್ಧರಿಸಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಇನ್ನು 25 ಬೇಸಿಸ್ ಪಾಯಿಂಟ್ ಹೆಚ್ಚಳದ ಮೂಲಕ ರೆಪೋ ದರಗಳು 6.5%ಕ್ಕೆ ಏರಿದ್ದು, ಬಡ್ಡಿದರಗಳು ಹೆಚ್ಚಲಿವೆ.