ನವದೆಹಲಿ, ಫೆ 08 ( DaijiworldNews/MS):ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಾದ ಟ್ವಿಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಜಾಗತಿಕವಾಗಿ ಬಳಕೆದಾರರಿಗೆ ಡೌನ್ ಆಗಿದೆ ಎಂದು ವರದಿಯಾಗಿದೆ.
ಹಲವಾರು ಟ್ವಿಟ್ಟರ್ ಬಳಕೆದಾರರು ಹೊಸ ಟ್ವೀಟ್ಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲಎಂದು ದೂರಿದ್ದಾರೆ. ಹೊಸ ಟ್ವೀಟ್ ಗಳನ್ನು ಪೋಸ್ಟ್ ಮಾಡುವ ವೇಳೆ, "ನೀವು ಟ್ವೀಟ್ಗಳನ್ನು ಕಳುಹಿಸಲು ದೈನಂದಿನ ಮಿತಿಯನ್ನು ಮೀರಿದ್ದೀರಿ" ಎಂದು ಪಾಪ್-ಅಪ್ ದೋಷ ಸಂದೇಶವನ್ನು ಎದುರಿಸುತ್ತಿದ್ದಾರೆ.
ಟ್ವಿಟರ್ನ ತಾಂತ್ರಿಕ ತಂಡವು ಸಮಸ್ಯೆಯ ಬಗ್ಗೆ ತಿಳಿದು ಬಂದಿದ್ದು ಅದನ್ನು ಸರಿಪಡಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದೆ.
'ನಿಮ್ಮಲ್ಲಿ ಕೆಲವರಿಗೆ ಟ್ವಿಟರ್ ನಿರೀಕ್ಷೆಯಂತೆ ಕೆಲಸ ಮಾಡದೇ ಇರಬಹುದು. ತೊಂದರೆಗಾಗಿ ಕ್ಷಮಿಸಿ. ಇದನ್ನು ಸರಿಪಡಿಸಲು ನಾವು ಕೆಲಸ ಮಾಡುತ್ತಿದ್ದೇವೆ, 'ಎಂದು ಕಂಪನಿಯು ತನ್ನ ಖಾತೆಯಲ್ಲಿ ಟ್ವೀಟ್ ಮಾಡಿದೆ.
12,000 ಕ್ಕೂ ಹೆಚ್ಚು ಫೇಸ್ಬುಕ್ ಬಳಕೆದಾರರು ದೋಷಗಳ ಕುರಿತು ದೂರಿದ್ದು ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಸುಮಾರು 7,000 ದೂರು ನೀಡಿದ್ದಾರೆ.