ಆನೇಕಲ್ ಫೆ 09( DaijiworldNews/MS): ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಹೃದಯಾಘಾತಕ್ಕೆ ಸಾವನ್ನಪ್ಪುವ ಪ್ರಕರಣಗಳು ದಿನೇದಿನೆ ಜಾಸ್ತಿಯಾಗುತ್ತಿದ್ದು ಇದು ಆತಂಕಕ್ಕೆ ಕಾರಣವಾಗುತ್ತಿದೆ.
ಇದೀಗ ರಾಜ್ಯದಲ್ಲಿ ಕಬಡ್ಡಿ ಆಡುತ್ತಿದ್ದ 17 ವರ್ಷದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹಾರ್ಟ್ಅಟ್ಯಾಟ್ನಿಂದ ಮೃತಪಟ್ಟಿದ್ದಾಳೆ.
ಬೆಂಗಳೂರು ನಗರ ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆಯ ಖಾಸಗಿ ಕಾಲೇಜು ವಿದ್ಯಾರ್ಥಿನಿ ಸಂಗೀತಾ ಏಕಾಏಕಿ ಕುಸಿದುಬಿದ್ದು ಮೃತಪಟ್ಟಿರುವ ದುರ್ದೈವಿ. ಸಂಗೀತಾ ಧಾರವಾಡ ಮೂಲದವಳಾಗಿದ್ದು ತಾನು ಅಭ್ಯಾಸಿಸುತ್ತಿದ್ದ ಕಾಲೇಜಿನ ಮಹಿಳಾ ಕಬಡ್ಡಿ ತಂಡದಲ್ಲಿದ್ದಳು. ಕಾಲೇಜಿನಲ್ಲಿ ಕ್ರೀಡಾ ಉತ್ಸವ ಆಯೋಜನೆ ಮಾಡಿದ್ದು ಈ ವೇಳೆ ಕಬಡ್ದಿ ಆಡುತ್ತಿರುವಾಗ ಕುಸಿದು ಬಿದ್ದ ಈಕೆಯನ್ನುಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗಮಧ್ಯೆ ಸಾವಿಗೀಡಾದ್ದಾಳೆ