ಶಿಮ್ಲಾ, ಫೆ 09( DaijiworldNews/MS): ಪ್ರಮುಖ ಬೆಳವಣಿಗೆಯಲ್ಲಿ, ಅದಾನಿ ವಿಲ್ಮಾರ್ ಗ್ರೂಪ್ ರಾಜ್ಯ ಅಬಕಾರಿ ಮತ್ತು ತೆರಿಗೆ ಇಲಾಖೆ (ಐಟಿ) ದಾಳಿ ನಡೆಸಿದೆ.
ಷೇರು ಕುಸಿತದಿಂದ ಕಂಗಾಲಾಗಿರುವ ಗೌತಮ್ ಅದಾನಿ ಒಡೆತನಕ್ಕೆ ಸೇರಿದ ಅದಾನಿ ವಿಲ್ಮಾರ್ ಸಂಸ್ಥೆ ಜಿಎಸ್ಟಿ ಪಾವತಿಸಿಲ್ಲ ಎಂಬ ಆರೋಪದಡಿ ಹಿಮಾಚಲಪ್ರದೇಶದಲ್ಲಿ ಅದಾನಿ ಕಂಪೆನಿಗಳ ಮೇಲೆ IT ದಾಳಿ ನಡೆಸಲಾಗಿದೆ.
ಬುಧವಾರ ರಾತ್ರಿ ಹಿಮಾಚಲದ ಅದಾನಿ ವಿಲ್ಮಾರ್ ಗ್ರೂಪ್ನ ಸಿ ಆಂಡ್ ಎಫ್ ಸ್ಟೋರ್ಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅದಾನಿ ಕಳೆದ 5 ವರ್ಷದಿಂದ ಸರಕು ಹಾಗೂ ಸೇವಾ ತೆರಿಗೆ ಜಮೆ ಮಾಡಿಲ್ಲ ಎಂಬ ಕಾರಣಕ್ಕೆ ಈ ರೈಡ್ ನಡೆದಿದೆ ಎಂದು ವರದಿಯಾಗಿದೆ.