ಭೋಪಾಲ್ , ಫೆ 09( DaijiworldNews/MS): ತಂದೂರಿ ರೊಟ್ಟಿಯನ್ನು ನಿಷೇಧಿಸಿ ಮಧ್ಯಪ್ರದೇಶ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ 5 ಲಕ್ಷ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮಧ್ಯಪ್ರದೇಶ ಸರ್ಕಾರವು ಭೋಪಾಲ್, ಇಂದೋರ್, ಜಬಲ್ಪುರ್, ಗ್ವಾಲಿಯರ್ನಲ್ಲಿ ಎಲ್ಲಾ ರೆಸ್ಟೋರೆಂಟ್ಗಳು ತಂದೂರಿ ರೊಟ್ಟಿ ತಯಾರಿಸಿ ಮಾರಾಟ ಮಾಡುವುದನ್ನು ನಿಷೇಧಿಸಿದೆ.
ಇತ್ತೀಚಿನ ದಿನಗಳಲ್ಲಿ ಮಧ್ಯಪ್ರದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಮಾಲಿನ್ಯವು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ತಂದೂರಿ ರೊಟ್ಟಿ ತಯಾರಿಸಲು ವಿಶೇಷ ಉಪಕರಣಗಳನ್ನು ಬಳಸಲಾಗುತ್ತದೆ. ಮರದ ಡ್ರಮ್ನಲ್ಲಿ ಇದ್ದಿಲು ಸುಟ್ಟು ಅವುಗಳನ್ನು ತಯಾರಿಸಲಾಗುತ್ತದೆ. ಅತಿಯಾದ ಕಲ್ಲಿದ್ದಲು ಬಳಕೆಯಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಗೆ ಹೆಚ್ಚುತ್ತಿದೆ. ಹೀಗಾಗಿ
ತಂದೂರಿ ರೊಟ್ಟಿ ತಯಾರಿಕೆಯಿಂದ ವಾಯು ಮಾಲಿನ್ಯ ಉಂಟಾಗುತ್ತಿದ್ದು ಅವುಗಳನ್ನು ತಯಾರಿಸದಂತೆ ಆಹಾರ ಇಲಾಖೆ ಈಗಾಗಲೇ ಸೂಚನೆ ನೀಡಿದೆ.
ಸರ್ಕಾರದ ಈ ನಿರ್ಧಾರ ಅಲ್ಲಿನ ಹೋಟೆಲ್ ಮತ್ತು ಧಾಬಾಗಳ ಮೇಲೆ ತೀವ್ರ ಪರಿಣಾಮ ಬೀರಿದೆ.