ಶ್ರೀನಗರ, ಫೆ 10 (DaijiworldNews/DB): ಭಾರತದ ಮೊದಲ ಲಿಥಿಯಂ ನಿಕ್ಷೇಪಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿವೆ.ಈ ಕುರಿತು ಕೇಂದ್ರ ಸರ್ಕಾರದ ಗಣಿ ಸಚಿವಾಲಯ ಗುರುವಾರ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ಭಾರತೀಯ ಭೂ ಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ರಿಯಾಸಿ ಜಿಲ್ಲೆಯ ಸಲಾಲ್- ಹೈಮಾನ್ ಎಂಬಲ್ಲಿ 56 ಲಕ್ಷ ಟನ್ನಷ್ಟು ಲಿಥಿಯಂ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಇವಿ ಬ್ಯಾಟರಿಗಳ ತಯಾರಿಕೆಗೆ ಲಿಥಿಯಂ ಅಗತ್ಯವಾಗಿದೆ. ಪ್ರಸ್ತುತ ಲಿಥಿಯಂ, ನಿಕಲ್ ಮುಂತಾದ ಖನಿಜಗಳನ್ನು ಭಾರತ ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ ಇದೀಗ ಜಮ್ಮು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದು ಭಾರತಕ್ಕೆ ಹೊಸ ಚೈತನ್ಯ ತಂದಿದೆ.