ನವದೆಹಲಿ, ಫೆ 10 ( DaijiworldNews/MS): ಗುಜರಾತ್ ಗಲಭೆ ಕುರಿತ ಬಿಬಿಸಿ ಸಾಕ್ಷ ಚಿತ್ರ ಮೇಲಿನ ನಿಷೇಧದ ವಿರುದ್ಧದ ಅರ್ಜಿಯನ್ನುಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
2002ರ ಗುಜರಾತ್ ಗಲಭೆಯನ್ನು ಆಧರಿಸಿ ಬಿಬಿಸಿ ದಿ ಮೋದಿ ಕ್ವೆಶ್ಚನ್ಸ್ ಸಾಕ್ಷಾ ಚಿತ್ರ ಮಾಡಿತ್ತು. ಸಾಕ್ಷ್ಯ ಚಿತ್ರ ಪ್ರದರ್ಶಿಸಿದ್ದ ಕಾರಣಕ್ಕೆ ಬಿಬಿಸಿ ವಾಹಿನಿಯನ್ನು ಭಾರತದಲ್ಲಿ ನಿಷೇಧಿಸಲು ಕೋರಿ ಹಿಂದೂ ಸೇನಾ ಅರ್ಜಿ ಸಲ್ಲಿಸಿತ್ತು. ತಾನು ಸೆನ್ಸಾರ್ಶಿಪ್ ಹೇರಲು ಸಾಧ್ಯವಿಲ್ಲ ಎಂದ ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ದುರುದ್ದೇಶಪೂರಿತ ಪ್ರಚಾರ ಎಂದು ಕೇಂದ್ರ ಸರ್ಕಾರ ಇದನ್ನು ನಿಷೇಧಿಸಿದೆ ಇದನ್ನು ಟ್ವಿಟರ್ ಮತ್ತು ಯೂಟ್ಯೂಬ್ ನಿಂದ ತೆಗೆದು ಹಾಕಲಾಗಿತ್ತು.
.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿಂಕಿ ಆನಂದ್, ಬಿಬಿಸಿ ಉದ್ದೇಶಪೂರ್ವಕವಾಗಿ ಭಾರತದ ಪ್ರತಿಷ್ಠೆಗೆ ಧಕ್ಕೆ ತರುತ್ತಿದೆ ಎಂದು ವಾದಿಸಿದ್ದು, ಸಾಕ್ಷ್ಯಚಿತ್ರದ ಹಿಂದಿರುವ ಪಿತೂರಿ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸುವಂತೆಯೂ ಕೋರಿದ್ದರು. ಈ ಮನವಿಯು ತಪ್ಪಾಗಿ ಗ್ರಹಿಸಲ್ಪಟ್ಟಿದೆ, ಸುಪ್ರೀಂ ಕೋರ್ಟ್ ಅಂತಹ ಆದೇಶಗಳನ್ನು ಹೇಗೆ ಜಾರಿಗೊಳಿಸುತ್ತದೆ” ಎಂದು ನ್ಯಾಯಾಧೀಶರು ಹೇಳಿದರು.