ನವದೆಹಲಿ, ಫೆ 10 (DaijiworldNews/DB): ಭಾರತದಲ್ಲಿ ಟಿಕ್ಟಾಕ್ ನಿಷೇಧಗೊಂಡ ಮೂರು ವರ್ಷಗಳ ಬಳಿಕ ಟಿಕ್ಟಾಕ್ ಭಾರತ ಘಟಕದ ಎಲ್ಲಾ ಉದ್ಯೋಗಿಗಳನ್ನು ವಜಾಗೊಳಿಸಲು ಸಂಸ್ಥೆ ನಿರ್ಧರಿಸಿದೆ.
ಬೈಟ್ ಡ್ಯಾನ್ಸ್ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಟಿಕ್ ಟಾಕ್ಗೆ ಕಳೆದ ಮೂರು ವರ್ಷಗಳ ಹಿಂದೆ ಭಾರತದಲ್ಲಿ ನಿಷೇಧ ಹೇರಲಾಗಿತ್ತು. ಆದರೆ ಅದರ ಕಚೇರಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಇದೀಗ ಭಾರತ ಸರ್ಕಾರದೊಂದಿಗಿನ ಒಪ್ಪಂದ ಷರತ್ತು ಪೂರೈಸಲು ಬೈಟ್ ಡ್ಯಾನ್ಸ್ ವಿಫಲವಾದ ಹಿನ್ನೆಲೆಯಲ್ಲಿ ಭಾರತದ ಘಟಕದ ಎಲ್ಲಾ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಭಾರತದ ಕಚೇರಿಯಲ್ಲಿರುವ ಎಲ್ಲಾ 40 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲು ನಾವು ನಿರ್ಧರಿಸಿದ್ದೇವೆ. ಪರಿಹಾರವಾಗಿ ಅವರಿಗೆ 9 ತಿಂಗಳ ವೇತನ ನೀಡಲಾಗುವುದು. ಉದ್ಯೋಗಿಗಳು ಇಲ್ಲಿವರೆಗೆ ನಿರ್ವಹಿಸಿದ ವಿಶಿಷ್ಟ ಕಾರ್ಯಕ್ಷಮತೆಗೆ ಧನ್ಯವಾದಗಳು ಎಂದು ಟಿಕ್ಟಾಕ್ ವಕ್ತಾರರು ತಿಳಿಸಿರುವುದಾಗಿ ವರದಿಯಾಗಿದೆ.